ಆಘಾತಕಾರಿ ಘಟನೆಯೊಂದರಲ್ಲಿ ಭಕ್ತನೊಬ್ಬ ತನ್ನ ಭಕ್ತಿಯ ಪರಾಕಾಷ್ಟೆ ಮೆರೆದಿದ್ದು, ತನ್ನ ನಾಲಿಗೆಯನ್ನೇ ಬ್ಲೇಡ್ ನಿಂದ ಕತ್ತರಿಸಿ ದೇವಿಗೆ ಅರ್ಪಿಸಿದ್ದಾನೆ. ಇದರ ಪರಿಣಾಮ ಈಗ ಗಂಭೀರವಾಗಿ ಗಾಯಗೊಂಡಿರುವ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಂಥದೊಂದು ಘಟನೆ ಉತ್ತರ ಪ್ರದೇಶದ ಕೌಶಂಬಿಯಲ್ಲಿ ನಡೆದಿದ್ದು, ತನ್ನ ಪತ್ನಿಯೊಂದಿಗೆ ಶೀತ್ಲಾ ಮಾತಾ ದೇವಸ್ಥಾನಕ್ಕೆ ಬಂದಿದ್ದ 38 ವರ್ಷದ ಸಂಪತ್ ಎಂಬಾತ ತನ್ನ ನಾಲಿಗೆ ಕತ್ತರಿಸಿ ಅದನ್ನು ದೇಗುಲದ ದ್ವಾರದ ಚೌಕಟ್ಟಿನ ಮೇಲಿಟ್ಟು ದೇವಿಗೆ ಅರ್ಪಿಸಿದ್ದಾನೆ.
ಬಳಿಕ ತೀವ್ರ ರಕ್ತಸ್ರಾವದಿಂದ ಸಂಪತ್ ಕುಸಿದು ಬಿದ್ದಿದ್ದು, ಆತನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಪತ್ನಿಯೊಂದಿಗೆ ದೇವಸ್ಥಾನಕ್ಕೆ ಹೋಗುವ ಅಭಿಲಾಷೆ ವ್ಯಕ್ತಪಡಿಸಿದ್ದ ಸಂಪತ್, ತನ್ನ ಹರಕೆಯ ಕುರಿತು ಯಾವುದೇ ವಿಷಯ ತಿಳಿಸಿರಲಿಲ್ಲವೆನ್ನಲಾಗಿದೆ.