ರೈಲ್ವೇ ಪೊಲೀಸರ ಹೃದಯಸ್ಪರ್ಶಿ ವಿಡಿಯೋ ಆಗಾಗ ಅಂತರ್ಜಾಲದಲ್ಲಿ ವೈರಲ್ ಆಗುತ್ತಿರುತ್ತದೆ. ಇದೀಗ ವೈರಲ್ ಆದ ವಿಡಿಯೋದಲ್ಲಿ ರೈಲ್ವೇ ಪ್ರೊಟೆಕ್ಷನ್ ಫೋರ್ಸ್ (ಆರ್ಪಿಎಫ್) ಸಹಾಯಕ ಇನ್ಸ್ಪೆಕ್ಟರ್ 19 ವರ್ಷದ ವ್ಯಕ್ತಿಯನ್ನು ಗಾಲಿಕುರ್ಚಿಯ ಮೂಲಕ ರೈಲಿಗೆ ಕರೆದೊಯ್ದು ಸಹಾಯ ಮಾಡಿದ್ದಾರೆ.
ಕಡಲೂರು ಜಿಲ್ಲೆಯ ವಿರುಧಾಚಲಂನಲ್ಲಿ ಸೆಪ್ಟೆಂಬರ್ 8ರಂದು ಈ ಘಟನೆ ನಡೆದಿದೆ. ಎಂ ಸರವಣನ್ ಎಂದು ಗುರುತಿಸಲಾದ ಸಹಾಯಕ ನಿರೀಕ್ಷಕರು ಕಡಲೂರು ಜಿಲ್ಲೆಯ ವಿರ್ದ್ಧಾಚಲಂನಕೀರನೂರ್ ನಿವಾಸಿ ಶಿವಕುಮಾರ್ ಅವರಿಗೆ ಸಹಾಯ ಮಾಡಿದ್ದಾರೆ. ವ್ಯಕ್ತಿ ತನ್ನ ಅಜ್ಜಿಯೊಂದಿಗೆ ವೈದ್ಯಕೀಯ ಚಿಕಿತ್ಸೆಗಾಗಿ ವೃದ್ಧಾಚಲಂನಿಂದ ಕೇರಳದ ವಡಕರಕ್ಕೆ ಪ್ರಯಾಣಿಸುತ್ತಿದ್ದರು.
ವಯಸ್ಸಾದ ಅಜ್ಜಿ ಯುವಕನನ್ನು ಗಾಲಿಕುರ್ಚಿಯಲ್ಲಿ ಕರೆದೊಯ್ಯಲು ಸಾಧ್ಯವಾಗದೆ ಕಷ್ಟಪಡುತ್ತಿರುವುದನ್ನು ಕಂಡ ಸರವಣನ್ ಸಹಾಯ ಮಾಡಲು ಮುಂದಾಗಿದ್ದಾರೆ. ರೈಲು ಬಂದ ಕೂಡಲೇ ಸರವಣನ್ ಸಹಾಯ ಹಸ್ತ ಚಾಚಿ ಯುವಕನನ್ನು ಗಾಲಿಕುರ್ಚಿಯಿಂದ ಮೇಲಕ್ಕೆತ್ತಿದರು. ನಂತರ ಅವರನ್ನು ಕಂಪಾರ್ಟ್ಮೆಂಟ್ನಲ್ಲಿ ಹಾಸಿಗೆಯ ಮೇಲೆ ಮಲಗಿಸಿದರು.
ಈ ವಿಡಿಯೋವನ್ನು ಐಎಎಸ್ ಅಧಿಕಾರಿ ಸುಪ್ರಿಯಾ ಸಾಹು ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದಾರೆ. ಮೂರು ತಿಂಗಳ ಹಿಂದೆ ಶಿವಕುಮಾರ್ ಎಡಗಾಲಿನಲ್ಲಿ ನೋವು ಕಾಣಿಸಿಕೊಂಡು ನಡೆಯಲು ಸಾಧ್ಯವಾಗುತ್ತಿರಲಿಲ್ಲ. 19 ವರ್ಷದ ಯುವಕ ಚಿಕಿತ್ಸೆಗಾಗಿ ಕೇರಳದ ವಡಕರಕ್ಕೆ ತೆರಳುತ್ತಿದ್ದ. ಈ ವೇಳೆ ರೈಲ್ವೇ ಪೊಲೀಸ್ ಸಹಾಯಹಸ್ತ ಚಾಚಿದ್ದಾರೆ ಎಂದು ಶೀರ್ಷಿಕೆ ನೀಡಲಾಗಿದೆ. ಈ ವಿಡಿಯೋ ಸದ್ಯ ವೈರಲ್ ಆಗಿದೆ.