ಪುರಾತತ್ತ್ವ ಶಾಸ್ತ್ರಜ್ಞರ ತಂಡವು ಇತ್ತೀಚೆಗೆ ಬೋನಿರ್ಯೊದ ಪೂರ್ವ ಕಾಲಿಮೆಂಟನ್ನಲ್ಲಿ ಬೇಟೆಗಾರ-ನ ಅಸ್ಥಿಪಂಜರದ ಅವಶೇಷಗಳನ್ನು ಪತ್ತೆಹಚ್ಚಿದೆ.
ಆಸ್ಟ್ರೇಲಿಯನ್ ಮತ್ತು ಇಂಡೋನೇಷಿಯಾದ ಪುರಾತತ್ವ ಶಾಸ್ತ್ರಜ್ಞರ ನೇತೃತ್ವದ ತಂಡವು ಅದೇ ಪ್ರದೇಶದಲ್ಲಿ ಸುಣ್ಣದ ಗುಹೆಯನ್ನು ಉತ್ಖನನ ಮಾಡುವಾಗ ಅವಶೇಷಗಳು ಕಂಡುಬಂದಿವೆ.
31,000 ವರ್ಷಗಳ ಹಿಂದೆ ನುರಿತ ಶಸ್ತ್ರಚಿಕಿತ್ಸಕರಿಂದ ಬೇಟೆಗಾರನ ಕೆಳ ಕಾಲನ್ನು ಕತ್ತರಿಸಲಾಗಿರಬಹುದು ಎಂದು ಸಂಶೋಧಕರು ಬಹಿರಂಗಪಡಿಸಿದ್ದಾರೆ ಎಂದು ಮಾಧ್ಯಮ ವರದಿ ಮಾಡಿದೆ.
ಸಂಶೋಧನಾ ತಂಡವು 2020ರಲ್ಲಿ ಪ್ರಾಚೀನ ರಾಕ್ ಕಲೆಯನ್ನು ಹುಡುಕುತ್ತಿತ್ತು. ಪಳೆಯುಳಿಕೆಗಳು ಮತ್ತು ಇತರ ಅವಶೇಷಗಳನ್ನು ಒಳಗೊಂಡಿರುವ ಪುರಾತನ ಅವಶೇಷಗಳ ಅಧ್ಯಯನವನ್ನು ಉಲ್ಲೇಖಿಸುವ ಪ್ಯಾಲಿಯೋಪಾಥೋಲಾಜಿಕಲ್ ವಿಶ್ಲೇಷಣೆ- ಪ್ರಕಾರ ಸಮಾಧಿಗೆ ಹಲವು ವರ್ಷಗಳ ಮೊದಲು ಶಸ್ತ್ರಚಿಕಿತ್ಸಕವಾಗಿ ಕಾಲನ್ನು ಕತ್ತರಿಸಿರಬಹುದೆಂದು ಊಹಿಸಲಾಗಿದೆ.
ಪುರಾತತ್ವಶಾಸ್ತ್ರಜ್ಞರು ರೇಡಿಯೊ ಐಸೋಟೋಪ್ ಡೇಟಿಂಗ್ ಅನ್ನು ಬಳಸಿಕೊಂಡು ಹಲ್ಲಿನ ಮತ್ತು ಸಮಾಧಿ ವಯಸ್ಸನ್ನು ಅಳೆಯುತ್ತಾರೆ, ಅವಶೇಷಗಳು ಸುಮಾರು 31,000 ವರ್ಷಗಳಷ್ಟು ಹಳೆಯದು ಎಂದು ಸಂಶೋಧಕರು ಅಂದಾಜಿಸಿದ್ದಾರೆ.
ಆಸ್ಟ್ರೇಲಿಯಾದ ಗ್ರಿಫಿತ್ ವಿಶ್ವವಿದ್ಯಾನಿಲಯದ ಸಂಶೋಧನಾ ಸಹೋದ್ಯೋಗಿಯಾದ ಡಾ. ಟಿಮ್ ಮಲೋನಿ ಸಂರ್ಪೂಣ ಉತ್ಖನನವನ್ನು ಮೇಲ್ವಿಚಾರಣೆ ಮಾಡಿದ್ದರು.
ಸಾಕಷ್ಟು ಆಯಾಮಯದಲ್ಲಿ ಸಂಶೋಧನೆ ಬೆಳಕು ಚೆಲ್ಲಿದ್ದು, ಸಾವಿರಾರು ವರ್ಷಗಳ ಹಿಂದಿನ ಪರಿಸ್ಥಿತಿಯನ್ನು ಎತ್ತಿ ತೋರಿಸಿದ್ದಾರೆ.