ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಭಾರಿ ಮಳೆಯ ಕಾರಣ ವಾಹನಗಳು ನೀರಲ್ಲಿ ಮುಳುಗಿ ಮಾಲೀಕರು ತೊಂದರೆ ಅನುಭವಿಸುವಂತಾಗಿದೆ.
ನೀರಲ್ಲಿ ಮುಳುಗಿದ ವಾಹನಗಳಿಗೆ ವಿಮೆ ಸೌಲಭ್ಯ ಇದೆಯೇ, ಇಲ್ಲವೇ ಎನ್ನುವ ಆತಂಕ ಎದುರಾಗಿದೆ. ಆದರೆ, ನೀರಲ್ಲಿ ವಾಹನ ಮುಳುಗಿದರೂ ವಿಮೆ ಸೌಲಭ್ಯ ಸಿಗುತ್ತದೆ. ಮಳೆ ನೀರಲ್ಲಿ ಮುಳುಗಿದ ಕಾರು ಅಥವಾ ವಾಹನಗಳಿಗೆ ಕಾಂಪ್ರೆಹೆನ್ಸಿವ್ ಇನ್ಸೂರೆನ್ಸ್ ಪಡೆದಿದ್ದರೆ ಕ್ಲೇಮ್ ಆಗುತ್ತದೆ. ಫಸ್ಟ್ ಪಾರ್ಟಿಯಾಗಿದ್ದರೆ ಮಾತ್ರ ವಿಮೆ ಹಣ ಬರುತ್ತದೆ. ಥರ್ಡ್ ಪಾರ್ಟಿ ವಿಮೆ ಪಡೆದುಕೊಂಡಿದ್ದರೆ ನೀರಿನಲ್ಲಿ ಮುಳುಗಿದ ವಾಹನಗಳಿಗೆ ಕ್ಲೇಮ್ ಸಿಗುವುದಿಲ್ಲ ಎನ್ನಲಾಗಿದೆ.
ಪ್ರಕೃತಿ ವಿಕೋಪದ ಅಡಿಯಲ್ಲಿ ವಿಮೆ ಕ್ಲೇಮ್ ಆಗುತ್ತದೆ. ಇದಕ್ಕೆ ಪೊಲೀಸರ ದೂರಿನ ಪ್ರತಿ ಅಥವಾ ಎಫ್ಐಆರ್ ಅಗತ್ಯವಿರುವುದಿಲ್ಲ ಎಂದು ಹೇಳಲಾಗಿದೆ. ನೀರಿನಲ್ಲಿ ಮುಳುಗಿದ ವಾಹನದ ಇಗ್ನೀಷಿಯನ್ ಕೀ ಆನ್ ಮಾಡಬೇಡಿ. ಕೀ ಆನ್ ಮಾಡಿದರೆ ಇಂಜಿನ್ ಡ್ಯಾಮೇಜ್ ಆಗಿ ಇನ್ಶೂರೆನ್ಸ್ ಕ್ಲೈಮ್ ಆಗುವುದಿಲ್ಲ. ಮುಳುಗಿದ ವಾಹನದ ಫೋಟೋ, ವಿಡಿಯೋ ತೆಗೆದು ವಿಮೆ ಕಂಪನಿಗೆ ಮಾಹಿತಿ ಕೊಡಿ. ವಿಮೆ ಕಂಪನಿಯ ಸೂಚನೆಗಳನ್ನು ಪಾಲಿಸಿ ವಿಮೆ ಪಡೆದುಕೊಳ್ಳಬಹುದಾಗಿದೆ ಎನ್ನಲಾಗಿದೆ.