ಅಪ್ರಾಪ್ತೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಹಿನ್ನೆಲೆಯಲ್ಲಿ ಬಾಲಕನೊಬ್ಬನ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದ್ದು, ಇದೀಗ ಎರಡು ಕುಟುಂಬಗಳ ಸದಸ್ಯರು ರಾಜಿ ಮಾಡಿಕೊಂಡಿರುವ ಕಾರಣಕ್ಕಾಗಿ ರಾಜ್ಯ ಹೈಕೋರ್ಟ್ ಬಾಲಕನ ವಿರುದ್ಧದ ಪೋಸ್ಕೋ ಕೇಸ್ ರದ್ದುಗೊಳಿಸಿದೆ.
ಕಳೆದ ವರ್ಷ ನವೆಂಬರ್ 21ರಂದು ಕಾಲೇಜಿಗೆ ತೆರಳಿದ್ದ ಅಪ್ರಾಪ್ತೆ ಮನೆಗೆ ಹಿಂದಿರುಗಿರಲಿಲ್ಲ. ಈ ಸಂದರ್ಭದಲ್ಲಿ ಆಕೆಯ ತಂದೆ ಪೊಲೀಸರಿಗೆ ದೂರು ನೀಡಿದ್ದು, ಮೊಬೈಲ್ ಲೊಕೇಶನ್ ಟ್ರ್ಯಾಕ್ ಮಾಡಿದಾಗ ಬಾಲಕನ ಜೊತೆ ಇರುವುದು ಕಂಡುಬಂದಿತ್ತು.
ಹೀಗಾಗಿ ಬಾಲಕನ ವಿರುದ್ಧ ಪೊಲೀಸರು ಪೋಸ್ಕೋ ಕೇಸ್ ದಾಖಲಿಸಿದ್ದರು. ಇದರ ಮಧ್ಯೆ ಅಪ್ರಾಪ್ತೆ ಕುಟುಂಬಸ್ಥರು ಹಾಗೂ ಬಾಲಕನ ಕುಟುಂಬಸ್ಥರು ರಾಜಿ ಸಂಧಾನ ನಡೆಸಿದ್ದು, ಇಬ್ಬರ ಭವಿಷ್ಯದ ಹಿನ್ನೆಲೆಯಲ್ಲಿ ಪ್ರಕರಣವನ್ನು ಹಿಂಪಡೆಯಲು ನಿರ್ಧರಿಸಿದ್ದರು.
ಇದರಿಂದ ಪೋಕ್ಸೋ ಪ್ರಕರಣದ ವಿಚಾರಣೆ ರದ್ದುಪಡಿಸುವಂತೆ ಕೋರಿ ಬಾಲಕನ ತಂದೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದು, ಇದನ್ನು ಪರಿಗಣಿಸಿದ ನ್ಯಾಯಾಲಯ ಪೋಕ್ಸೋ ಕೇಸ್ ರದ್ದುಗೊಳಿಸಿದೆ.