ನವದೆಹಲಿ: ಬೇಡಿಕೆ ಕುಸಿತದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬ್ರೆಂಟ್ ಬ್ಯಾರಲ್ ಗೆ 90 ಡಾಲರ್ ಗಿಂತಲೂ ಕಡಿಮೆಯಾಗಿದ್ದು, ಕಳೆದ ಜನವರಿ ನಂತರ ಇದು ಅತ್ಯಂತ ಕನಿಷ್ಠ ದರವಾಗಿದೆ. ಕಚ್ಚಾ ತೈಲ ದರ ಕುಸಿತವಾದ ಹಿನ್ನೆಲೆಯಲ್ಲಿ ದೇಶಿಯವಾಗಿ ಪೆಟ್ರೋಲ್ ಮತ್ತು ಡೀಸೆಲ್ ದರ ಕೂಡ ಇಳಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ದರ ಗಣನೀಯ ಕುಸಿತ ಕಂಡಿದ್ದರೂ, ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಇಳಿಕೆ ಮಾಡಿಲ್ಲ. 2022ರ ಮಾರ್ಚ್ ನಲ್ಲಿ ಕಚ್ಚಾತೈಲ ದರ ಬ್ಯಾರೆಲ್ ಗೆ 120 ಡಾಲರ್ ವರೆಗೆ ಏರಿಕೆಯಾಗಿತ್ತು. ಜೂನ್ ನಲ್ಲಿ 117 ಡಾಲರ್ ಗೆ ಇಳಿಕೆ ಕಂಡಿದ್ದು, ಈಗ ಸೆ. 8 ರಂದು 87.57 ಡಾಲರ್ ಗೆ ಇಳಿದಿದೆ. ದೇಶದಲ್ಲಿಯೂ ಗ್ರಾಹಕರಿಗೆ ತೈಲ ದರ ಇಳಿಕೆಯ ಪ್ರಯೋಜನ ಸಿಗಬೇಕೆಂಬ ಒತ್ತಾಯ ಕೇಳಿ ಬಂದಿದ್ದು, ಸರ್ಕಾರ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.