ದೇಶದಲ್ಲಿ ದಿಢೀರ್ ಆಗಿ ಅಕ್ಕಿಯ ಬೆಲೆ ಏರಿಕೆ ಕಂಡಿದೆ. ಕಳೆದ ವಾರದಿಂದ ಸುಮಾರು ಶೇ.5 ರಷ್ಟು ಬೆಲೆ ಏರಿಕೆ ಕಂಡಿದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಬಾಂಗ್ಲಾದೇಶ ಅಕ್ಕಿ ಮೇಲಿನ ಆಮದು ಸುಂಕವನ್ನು ಇನ್ನೊಮ್ಮೆ ಕಡಿತಗೊಳಿಸಿದೆ. ಶೇ.25 ರಿಂದ ಶೇ.15.25ಕ್ಕೆ ಇಳಿಕೆ ಮಾಡಿದೆ.
ಇನ್ನು ಈ ಇಳಿಕೆಯಿಂದಾಗಿ ಬಾಂಗ್ಲಾದೇಶ ಅಕ್ಕಿ ಬೇಡಿಕೆ ಹೆಚ್ಚಿಸಲಿದೆ ಎಂದು ಹೇಳಲಾಗುತ್ತಿದೆ. ಕರ್ನಾಟಕ ಸೇರಿದಂತೆ ಉತ್ತರ ಪ್ರದೇಶ, ಮಧ್ಯ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಬಿಹಾರದಿಂದ ಬಾಂಗ್ಲಾದೇಶಕ್ಕೆ ಅಕ್ಕಿ ರಫ್ತು ಮಾಡಲಾಗುತ್ತದೆ.
ಅಕ್ಕಿಗೆ ಈ ವರ್ಷ ಬೇಡಿಕೆ ಹೆಚ್ಚಾಗಿತ್ತು ಎನ್ನಲಾಗಿದೆ. ಇದರ ಜೊತೆಗೆ ಈ ವರ್ಷ ಭತ್ತ ಬೆಳೆಯುವುದು ಕೂಡ ಕಡಿಮೆಯಾಗಿದೆಯಂತೆ. ಈ ಕಾರಣದಿಂದಲೂ ಅಕ್ಕಿ ಬೆಲೆ ಏರಿಕೆಯಾಗಿದೆ ಎನ್ನಲಾಗುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಭತ್ತದ ಕೃಷಿ ಕಡಿಮೆಯಾಗಿದೆಯಂತೆ.