alex Certify ‘ಆಪಲ್‌’ ಗೆ ಟಕ್ಕರ್‌ ಕೊಡ್ತಿದೆ ಗೂಗಲ್‌…! ಪಿಕ್ಸೆಲ್‌ 7 ಜೊತೆಗೆ ಮೊದಲ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಪಲ್‌’ ಗೆ ಟಕ್ಕರ್‌ ಕೊಡ್ತಿದೆ ಗೂಗಲ್‌…! ಪಿಕ್ಸೆಲ್‌ 7 ಜೊತೆಗೆ ಮೊದಲ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಮುಹೂರ್ತ ಫಿಕ್ಸ್‌

ಗೂಗಲ್ ಕಂಪನಿ ಕೂಡ ಸ್ಮಾರ್ಟ್‌ ವಾಚ್‌ ಬಿಡುಗಡೆಗೆ ಸಜ್ಜಾಗಿದೆ. ಅಕ್ಟೋಬರ್ 6 ರಂದು ಪಿಕ್ಸೆಲ್ 7 ಮೊಬೈಲ್‌ ಹಾಗೂ ಗೂಗಲ್‌ನ ಮೊದಲ ಸ್ಮಾರ್ಟ್‌ ವಾಚ್ ಮಾರುಕಟ್ಟೆಗೆ ಬರಲಿದೆ. ಆಪಲ್‌ ಕಂಪನಿಯ ಸ್ಮಾರ್ಟ್‌ವಾಚ್‌ಗಳಿಗೆ ಇದು ಟಕ್ಕರ್‌ ಕೊಡುವ ತಯಾರಿಯಲ್ಲಿದೆ.

‘ಮೇಡ್ ಬೈ ಗೂಗಲ್’ ಎಂದೇ ಕರೆಯಲಾಗುವ ಯೋಜನೆಯ ಅಡಿಯಲ್ಲಿ ಗೂಗಲ್‌ ಒಂದಾದ ಮೇಲೊಂದರಂತೆ ಹೊಸ ಹೊಸ ಡಿವೈಸ್‌ಗಳನ್ನು ಬಿಡುಗಡೆ ಮಾಡುತ್ತಿದೆ. ಗೂಗಲ್‌ನ ಹೊಸ ಸಾಧನಗಳು GoogleStore.com ಮತ್ತು ನ್ಯೂಯಾರ್ಕ್‌ನಲ್ಲಿರುವ ಗೂಗಲ್‌ ಮಳಿಗೆಗಳಲ್ಲಿ ಖರೀದಿಗೆ ಲಭ್ಯವಿವೆ. ಅಕ್ಟೋಬರ್ 6 ರಂದು MadeByGoogle ಕಾರ್ಯಕ್ರಮವನ್ನು ನೇರಪ್ರಸಾರ ಮಾಡುತ್ತಿದ್ದು, ಅದರಲ್ಲಿ ಪಾಲ್ಗೊಳ್ಳುವಂತೆ ಬಳಕೆದಾರರನ್ನು ಗೂಗಲ್‌ ಆಹ್ವಾನಿಸಿದೆ.

GOOGLE ಪಿಕ್ಸೆಲ್ 7 ಸರಣಿ

ಪಿಕ್ಸೆಲ್ 7 ಸರಣಿಯು ಸೆಕೆಂಡ್‌ ಜನರೇಶನ್‌ನ ‘ಟೆನ್ಸರ್ ಜಿ 2’ ಚಿಪ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಟೆನ್ಸರ್ ಚಿಪ್ ಅನ್ನು Samsung ಸಹಭಾಗಿತ್ವದಲ್ಲಿ ನಿರ್ಮಿಸಲಾಗಿದೆ. ಮುಂದಿನ ವರ್ಷ ಪಿಕ್ಸೆಲ್ 7 ಎ ಬಿಡುಗಡೆಯಾಗುವ ನಿರೀಕ್ಷೆ ಇದೆ. ಪಿಕ್ಸೆಲ್ 7 ಫೋನ್‌ಗಳು ಆಂಡ್ರಾಯ್ಡ್ 13ರಲ್ಲಿ ರನ್ ಆಗುತ್ತವೆ ಮತ್ತು ಟೆನ್ಸರ್ ಎಂಬ Googleನ ಕಸ್ಟಮ್ ಮೊಬೈಲ್ ಚಿಪ್‌ನ ಇತ್ತೀಚಿನ ಪುನರಾವರ್ತನೆಯನ್ನು ಒಳಗೊಂಡಿರುತ್ತವೆ. Tensor G2 Pixel 7 ಮತ್ತು Pixel 7 Pro ಅನ್ನು ಫೋಟೋಗಳು, ವಿಡಿಯೊಗಳು, ಭದ್ರತೆ ಮತ್ತು ಧ್ವನಿ ಗುರುತಿಸುವಿಕೆಗೆ ಇನ್ನಷ್ಟು ಉಪಯುಕ್ತವಾದ, ವೈಯಕ್ತೀಕರಿಸಿದ ವೈಶಿಷ್ಟ್ಯಗಳನ್ನು ತರಲು ಗೂಗಲ್‌ ಮುಂದಾಗಿದೆ.

GOOGLE ಪಿಕ್ಸೆಲ್ ವಾಚ್

ಪಿಕ್ಸೆಲ್ ವಾಚ್ ವೃತ್ತಾಕಾರದ, ಗುಮ್ಮಟ ವಿನ್ಯಾಸದೊಂದಿಗೆ ಬರುತ್ತದೆ. ಸೈಡ್ ಬಟನ್ ಅನ್ನು ಒಳಗೊಂಡಿದೆ. ಮರುಬಳಕೆಯ ಸ್ಟೇನ್‌ಲೆಸ್ ಸ್ಟೀಲ್‌ನಿಂದ ಇದು ಮಾಡಲ್ಪಟ್ಟಿದೆ. ವಾಚ್ Wear OS 3 ನಲ್ಲಿ ಕಾರ್ಯನಿರ್ವಹಿಸುತ್ತದೆ. ಉತ್ತಮ ನ್ಯಾವಿಗೇಶನ್ ಮತ್ತು ಸ್ಮಾರ್ಟ್ ನೋಟಿಫಿಕೇಶನ್‌ಗಳನ್ನು ಕೊಡಬಲ್ಲದು. ನಿಮಗಿಷ್ಟವಾದ ಬ್ಯಾಂಡ್‌ಗಳನ್ನ ಇದಕ್ಕೆ ಸುಲಭವಾಗಿ ಲಗತ್ತಿಸಬಹುದು. ಈ ವಾಚ್‌ನೊಂದಿಗೆ ನೀವು ಹೊಸ Wear OS by Google ಅನುಭವವನ್ನು ಹೊಂದಲಿದ್ದೀರಿ. ಆರೋಗ್ಯ ಮತ್ತು ಫಿಟ್‌ನೆಸ್ ಕುರಿತಾದ ನಿಖರ ಮಾಹಿತಿಗಳೂ ದೊರೆಯುತ್ತವೆ. ಗೂಗಲ್, ಫಿಟ್‌ಬಿಟ್ ಅನ್ನು 2.1 ಬಿಲಿಯನ್‌ ಡಾಲರ್‌ಗೆ ಖರೀದಿಸಿತ್ತು. ನ್ಯೂಯಾರ್ಕ್‌ನ ವಿಲಿಯಮ್ಸ್‌ಬರ್ಗ್ನಲ್ಲಿ ವಾಚ್‌ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...