ಶಾಲೆಗ ಹೋಗುವ ಮಕ್ಕಳನ್ನು ಮನೆಯಲ್ಲಿ ಸಂಬಾಳಿಸುವುದು ದೊಡ್ಡ ತಲೆಬಿಸಿಯ ಕೆಲಸ. ಶಾಲೆಗೆ ರಜೆ ಇದ್ದಾಗ ಅವರನ್ನು ಒಂದೆಡೆ ಕೂರಿಸಿಕೊಂಡು ಹೇಳಿಕೊಡುವುದು ಪೋಷಕರಿಗೆ ಸವಾಲಿನ ಕೆಲಸವೆ ಸರಿ.
ಶಾಲೆಯಲ್ಲಿ ತಮ್ಮ ಗೆಳೆಯರೊಂದಿಗೆ ಆಡವಾಡುತ್ತಾ ಕಾಲ ಕಳೆಯುವ ಮಕ್ಕಳು ಮನೆಯಲ್ಲಿ ಪೋಷಕರ ಮಾತು ಕೇಳುವುದಿಲ್ಲ. ಮೊಬೈಲ್, ಟಿವಿ ನೋಡಲು ಹಠ ಮಾಡುತ್ತಾರೆ.
ಇನ್ನು ಪೋಷಕರು ಕೂಡ ಮಕ್ಕಳ ತುಂಟಾಟ ಸಹಿಸಿಕೊಳ್ಳುವುದಕ್ಕೆ ಆಗದೇ ಒಂದೇಟು ಹೊಡೆಯುವುದು, ಬೈಯುವುದು ಮಾಡುತ್ತಾರೆ. ಇದರಿಂದ ಕೂಡ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ.
ಹಾಗಾಗಿ ಆದಷ್ಟು ಶಾಂತ ರೀತಿಯಲ್ಲಿ ಮಕ್ಕಳನ್ನು ನಿಭಾಯಿಸುವುದನ್ನು ಕಲಿಯಿರಿ. ಅವರು ಹೇಳಿದ್ದಕ್ಕೆಲ್ಲಾ ಸರಿ ಎಂದು ತಲೆ ಅಲ್ಲಾಡಿಸುವ ಬದಲು ಆ ವಸ್ತುವಿನ ಅಗತ್ಯದ ಕುರಿತು ಅವರೊಂದಿಗೆ ಚರ್ಚಿಸಿ ಆಮೇಲೆ ಅದನ್ನು ಅವರಿಗೆ ತೆಗೆಸಿಕೊಡಿ.
ಇನ್ನು ಪಾಠ ಓದಿಸುವಾಗ ಒಂದೇ ಬಾರಿ ಅದನ್ನು ಮುಗಿಸಲಿ ಎಂಬ ಒತ್ತಡ ಹೇರಬೇಡಿ. ಶಾಲೆಯಲ್ಲಿ ಟೀಚರ್ ಕಲಿಸುವುದಕ್ಕೂ, ಮನೆಯಲ್ಲಿ ಹೇಳಿಕೊಡುವುದಕ್ಕೂ ತುಂಬಾ ವ್ಯತ್ಯಾಸವಿದೆ. ಒಂದು ನಿರ್ಧಿಷ್ಟ ಸಮಯದಲ್ಲಿ ಅವರಿಗೆ ಹೇಳಿಕೊಡಿ. ಆಗ ಅವರ ಮನಸ್ಸು ಕೂಡ ಅದಕ್ಕೆ ಹೊಂದಿಕೊಳ್ಳುತ್ತದೆ.