ಸಾಮಾಜಿಕ ಜಾಲತಾಣದಲ್ಲಿ ಹಲವಾರು ವಿಭಿನ್ನ, ನಾವೀನ್ಯತೆಯ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತವೆ. ಇದೀಗ ವೈರಲ್ ಆಗಿರೋ ವಿಡಿಯೋ ನೋಡಿದ್ರೆ ಖಂಡಿತಾ ನೀವು ಹುಬ್ಬೇರಿಸುತ್ತೀರಿ.
ಹೌದು, ಬಾಲಕನೊಬ್ಬ ಮರದ ತುಂಡುಗಳಿಂದ ತಾತ್ಕಾಲಿಕ ಬುಲ್ಡೋಜರ್ ಅನ್ನು ರಚಿಸಿದ್ದಾನೆ. ಇದನ್ನು ಟ್ವಿಟ್ಟರ್‌ನಲ್ಲಿ ಎಂಜಿನಿಯರಿಂಗ್ ಇನ್ವೆನ್ಶನ್ಸ್ ಎಂಬ ಪುಟವು ಹಂಚಿಕೊಂಡಿದ್ದು, ಈಗಾಗಲೇ ಎರಡು ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಈಗ ವೈರಲ್ ಆಗಿರುವ ವಿಡಿಯೋದಲ್ಲಿ, ಬಾಲಕನೊಬ್ಬ ಮರದ ತುಂಡುಗಳಿಂದ ವಿನ್ಯಾಸಗೊಳಿಸಿದ ತಾತ್ಕಾಲಿಕ ಬುಲ್ಡೋಜರ್ ಅನ್ನು ಬಳಸುತ್ತಿರುವುದನ್ನು ಕಾಣಬಹುದು. ಅದರಲ್ಲಿ ಮಣ್ಣನ್ನು ಅಗೆಯಲು ಮರದಿಂದ ಮಾಡಿದ ಅಗೆಯುವ ಯಂತ್ರವನ್ನು ಹೊಂದಿದೆ. ಅಷ್ಟೇ ಅಲ್ಲ ಬಾಲಕ ಕುಳಿತುಕೊಳ್ಳಲು ಮತ್ತು ಕಾರ್ಯನಿರ್ವಹಿಸಲು ಸ್ಥಳವನ್ನು ಸಹ ಹೊಂದಿತ್ತು.
ಬಾಲಕನ ಸೃಜನಾತ್ಮಕ ವಿನ್ಯಾಸವು ನೆಟ್ಟಿಗರ ಮನಗೆದ್ದಿದೆ. ಈ ವಿಡಿಯೋ ವೈರಲ್ ಆಗಿದ್ದು, ಬಹಳಷ್ಟು ಜನರು ಬಾಲಕನ ಕೌಶಲ್ಯಕ್ಕೆ ಪ್ರಭಾವಿತರಾಗಿದ್ದಾರೆ.
https://twitter.com/engineering_i0/status/1565693084188282880?ref_src=twsrc%5Etfw%7Ctwcamp%5Etweetembed%7Ctwterm%5E1565693084188282880%7Ctwgr%5E3b096b8df9755dcdfda627de57f7f2aae886f7ec%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fboy-creates-makeshift-bulldozer-with-wooden-sticks-in-viral-video-internet-reacts-1996973-2022-09-06
https://twitter.com/praveen98428742/status/1565694874724077568?ref_src=twsrc%5Etfw%7Ctwcamp%5Etweetembed%7Ctwterm%5E1565694874724077568%7Ctwgr%5E3b096b8df9755dcdfda627de57f7f2aae886f7ec%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fboy-creates-makeshift-bulldozer-with-wooden-sticks-in-viral-video-internet-reacts-1996973-2022-09-06