ದೇಶದಲ್ಲಿ 5G ಸೇವೆ ಆರಂಭಕ್ಕೆ ಸಿದ್ಧತೆ ನಡೆದಿದ್ದು, ರಿಲಯನ್ಸ್ ಜಿಯೋ ದೀಪಾವಳಿ ವೇಳೆಗೆ ದೇಶದ ಪ್ರಮುಖ ಮಹಾನಗರಗಳಲ್ಲಿ ತನ್ನ 5G ಸೇವೆ ಬಳಕೆದಾರರಿಗೆ ಲಭ್ಯವಾಗಲಿದೆ ಎಂದು ಘೋಷಿಸಿದೆ. ಇದರ ಮಧ್ಯೆ ಹಾಲಿ ನೆಟ್ವರ್ಕ್ ಕುರಿತು ಶಾಕಿಂಗ್ ಸಂಗತಿಯೊಂದು ಬಹಿರಂಗವಾಗಿದೆ.
‘ಲೋಕಲ್ ಸರ್ಕಲ್’ ಎಂಬ ಖಾಸಗಿ ಸಂಸ್ಥೆ ಸಮೀಕ್ಷೆ ನಡೆಸಿದ ವೇಳೆ ಪ್ರಸ್ತುತ ಮೊಬೈಲ್ ಬಳಸುತ್ತಿರುವ ಶೇ.50ಕ್ಕೂ ಅಧಿಕ ಗ್ರಾಹಕರು ತಮಗೆ ನೆಟ್ವರ್ಕ್ ಸಮಸ್ಯೆ ಮತ್ತು ಕಾಲ್ ಡ್ರಾಪ್ ಸಮಸ್ಯೆ ಎದುರಾಗಿದೆ ಎಂಬ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ದೇಶದಾದ್ಯಂತ ನಡೆದ ಈ ಸಮೀಕ್ಷೆಯಲ್ಲಿ 31 ಸಾವಿರಕ್ಕೂ ಅಧಿಕ ಮಂದಿ ತಮ್ಮ ಪ್ರತಿಕ್ರಿಯೆಯನ್ನು ದಾಖಲಿಸಿದ್ದು, ಈ ವೇಳೆ ಕರೆ ಗುಣಮಟ್ಟದ ಕುರಿತೂ ಅಪಸ್ವರ ಎತ್ತಿದ್ದಾರೆ. ನೆಟ್ವರ್ಕ್ ಸಮಸ್ಯೆ ಎದುರಾಗಿರುವ ಕಾರಣಕ್ಕೆ ವೈಫೈ ಮೊರೆ ಹೋಗಿರುವುದಾಗಿಯೂ ಹಲವರು ಹೇಳಿಕೊಂಡಿದ್ದಾರೆ.