alex Certify ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯ ‘ಪ್ರಯೋಜನ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಣ್ಣು ತಿನ್ನುವುದರಿಂದ ಸಿಗಲಿದೆ ಇಷ್ಟೆಲ್ಲಾ ಆರೋಗ್ಯ ‘ಪ್ರಯೋಜನ’

ಹಣ್ಣುಗಳು ಆರೋಗ್ಯಕ್ಕೆ ಉತ್ತಮ ಔಷಧ. ಪ್ರತಿ ನಿತ್ಯ ಹಣ್ಣುಗಳ ಸೇವನೆಯಿಂದ ರೋಗಗಳನ್ನು ದೂರ ಇಡಬಹುದು. ಹಾಗೇ ಬಾಳೆಹಣ್ಣು ಕೂಡ ಆರೋಗ್ಯಕ್ಕೆ ಉತ್ತಮವಾದುದು ಎನ್ನುವುದು ಗೊತ್ತಿರುವ ವಿಚಾರವೇ.

ಸಾಮಾನ್ಯವಾಗಿ ಬಾಳೆಹಣ್ಣು ಆರೋಗ್ಯಕ್ಕೆ ಎಷ್ಟು ಉತ್ತಮ ಹಣ್ಣೋ ಅದೇ ರೀತಿ ಆರೋಗ್ಯದ ಜೊತೆಗೆ ತ್ವಚೆಗೂ ಈ ಹಣ್ಣು ಉತ್ತಮವಾದದ್ದು. ಬಾಳೆ ಹಣ್ಣುಗಳಲ್ಲೂ ಹಲವಾರು ವಿಧಗಳಿವೆ. ಸಾಮಾನ್ಯವಾಗಿ ಪೂಜೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಬಾಳೆ ಹಣ್ಣು.

ಸಾಮಾನ್ಯವಾಗಿ ಬಾಳೆಹಣ್ಣನ್ನು ಎರಡು ತಿಂದು ಒಂದು ಲೋಟ ನೀರು ಕುಡಿದರೆ ಸಾಕು ಊಟ ಮಾಡಿದಷ್ಟು ಪೋಷಕಾಂಶ ಆಗುತ್ತದೆ ಅನ್ನೋದು ಹಲವರ ಮಾತು.

ಜಿಮ್ ಮಾಡುವವರು ಅಥವಾ ವ್ಯಾಯಾಮ ಮಾಡುವವರು ಬಾಳೆಹಣ್ಣನ್ನು ಹೆಚ್ಚಾಗಿ ತಿನ್ನಬೇಕು. ಬಾಳೆಹಣ್ಣು ತಿನ್ನೋದರಿಂದ ಹೆಚ್ಚಿನ ಆಯಾಸವಾಗುವುದಿಲ್ಲ.

ಯಾಕೆಂದರೆ ಬಾಳೆಹಣ್ಣಿನಲ್ಲಿರುವ ಸಕ್ಕರೆ ರಕ್ತದಲ್ಲಿ ನಿಧಾನವಾಗಿ ಮಿಳಿತಗೊಂಡು ಸೂಕ್ತ ಪ್ರಮಾಣದಲ್ಲಿ ಸ್ನಾಯುಗಳಿಗೆ ಪೂರೈಸುತ್ತದೆ.

ಇನ್ನು ಆರೋಗ್ಯಕ್ಕೆ ಬಾಳೆಹಣ್ಣು ಎಷ್ಟು ಮುಖ್ಯವೋ ತ್ವಚೆಗೂ ಅಷ್ಟೇ ಮುಖ್ಯವಾಗಿದೆ. ಬಾಳೆಹಣ್ಣು ನೈಸರ್ಗಿಕ ಮಾಯಿಸ್ಚರೈಸರ್ ಆಗಿದೆ. ಹಾಗಾಗಿ ಇದನ್ನು ಬಳಸುವುದರಿಂದ ನೈಸರ್ಗಿಕ ತ್ವಚೆ ಹೊಂದಬಹುದು‌. ಬಾಳೆಹಣ್ಣಿನ ಮಾಸ್ಕ್ ಬಳಸುವುದರಿಂದ ತ್ವಚೆ ಕಾಂತಿಯುತವಾಗುತ್ತದೆ. ಮತ್ತು ಮೃದುವಾಗುತ್ತದೆ. ಒಣಗಿದ ಚರ್ಮ ಹೊಂದಿದವರಿಗೆ ಮಾಯಿಸ್ಚರೈಸರ್ ಆಗಿ ಬಾಳೆಹಣ್ಣು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...