ನವದೆಹಲಿ: ನಾಳೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು. ಜುಲೈ 17 ರಂದು ದೇಶಾದ್ಯಂತ 546 ನಗರಗಳಲ್ಲಿನ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು.
ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳಿಗೆ ನೀಟ್ ಪರೀಕ್ಷೆ ನಡೆಸಲಾಗಿತ್ತು. 18 ಲಕ್ಷ ವಿದ್ಯಾರ್ಥಿಗಳು ನೀಟ್ ಪರೀಕ್ಷೆಗಾಗಿ ನೋಂದಣಿ ಮಾಡಿಕೊಂಡಿದ್ದರು. NTA ಅಧಿಕೃತ ವೆಬ್ಸೈಟ್ meet.nta.nic.in ನಲ್ಲಿ ಫಲಿತಾಂಶ ಲಭ್ಯವಾಗಿರುತ್ತದೆ.
ತಾತ್ಕಾಲಿಕ ಕೀ ಉತ್ತರಗಳನ್ನು ಕಳೆದ ವಾರ ಪ್ರಕಟಿಸಲಾಗಿದೆ. ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 2 ರವರೆಗೆ ಉತ್ತರದ ಕೀಗೆ ಆಕ್ಷೇಪಣೆಗಳನ್ನು ವ್ಯಕ್ತಪಡಿಸಲು ಅನುಮತಿಸಲಾಗಿತ್ತು.
ನಿರೀಕ್ಷಿತ ಕಟ್ ಆಫ್ ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 50 ಪ್ರತಿಶತ, PH ಅಭ್ಯರ್ಥಿಗಳಿಗೆ 45 ಪ್ರತಿಶತ ಮತ್ತು SC/ST/OBC ವರ್ಗದ ಅಭ್ಯರ್ಥಿಗಳಿಗೆ 40 ಪ್ರತಿಶತ. ಫಲಿತಾಂಶ ಪ್ರಕಟವಾದ ನಂತರ ಕಟ್ ಆಫ್ ಅಂಕಗಳನ್ನು ಬಿಡುಗಡೆ ಮಾಡಲಾಗುವುದು.
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ NTA ಯಿಂದ ನಾಳೆ, ಸೆಪ್ಟೆಂಬರ್ 7 ರಂದು neet.nta.nic.in ನಲ್ಲಿ ಬಿಡುಗಡೆಯಾಗಲಿದ್ದು, ಫಲಿತಾಂಶ ಬಿಡುಗಡೆಯಾದ ನಂತರ, ಅಭ್ಯರ್ಥಿಗಳು ತಮ್ಮ ಫಲಿತಾಂಶವನ್ನು ಡೌನ್‌ಲೋಡ್ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಲಾಗಿದೆ.