ಮಂಡ್ಯ: ಗ್ಯಾಂಗ್ರಿನ್ ರೋಗಿಯ ಕಾಲು ಕತ್ತರಿಸಿ ಅದನ್ನು ಮಣ್ಣು ಮಾಡುವಂತೆ ಪತ್ನಿ ಕೈಗೆ ಆಸ್ಪತ್ರೆ ಸಿಬ್ಬಂದಿ ಕೊಟ್ಟಿದ್ದಾರೆ. ಮಂಡ್ಯದ ಮಿಮ್ಸ್ ಆಸ್ಪತ್ರೆಯಲ್ಲಿ ಇಂತಹ ಘಟನೆ ನಡೆದಿದೆ.
ಶಸ್ತ್ರಚಿಕಿತ್ಸೆಯ ನಂತರ ಕತ್ತರಿಸಿದ ಕಾಲನ್ನು ಪತ್ನಿಯ ಕೈಗೆ ಕೊಟ್ಟು ಮಣ್ಣು ಮಾಡುವಂತೆ ಹೇಳಿದ್ದು, ಪತಿಯ ಕಾಲು ಕೈಯಲ್ಲಿ ಹಿಡಿದುಕೊಂಡ ಪತ್ನಿ ಕಣ್ಣೀರಿಟ್ಟಿದ್ದಾರೆ. ಮಂಡ್ಯ ತಾಲ್ಲೂಕಿನ ಕಿಲಾರ ಗ್ರಾಮದ ವ್ಯಕ್ತಿ ಗ್ಯಾಂಗ್ರೀನ್ ನಿಂದ ಬಳಲುತ್ತಿದ್ದರು. ಮಂಡ್ಯದ ಮಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಅವರಿಗೆ ಮೂರ್ನಾಲ್ಕು ದಿನಗಳ ಕಾಲ ಚಿಕಿತ್ಸೆ ನೀಡಿದ ನಂತರ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ವ್ಯಕ್ತಿಯ ಕಾಲು ಕತ್ತರಿಸಿದ ಆಸ್ಪತ್ರೆಯ ವೈದ್ಯರು ಅದನ್ನು ಪತ್ನಿಯ ಕೈಗೆ ಕೊಟ್ಟು ಹೂಳುವಂತೆ ತಿಳಿಸಿದ್ದಾರೆ. ಇದರಿಂದಾಗಿ ದಿಕ್ಕು ತೋಚದಂತಹದ ಪತ್ನಿ ಗಂಡನ ಕಾಲನ್ನು ಹಿಡಿದು ಆಸ್ಪತ್ರೆ ಬಳಿ ಅಳುತ್ತಾ ನಿಂತಿದ್ದಾರೆ. ಗಂಡನ ಕಾಲನ್ನು ಮಣ್ಣು ಮಾಡಲು ಆಸ್ಪತ್ರೆಯ ಸಿಬ್ಬಂದಿ ಸಾವಿರಾರು ರೂಪಾಯಿ ಕೇಳಿದ್ದಾರೆ ಎಂದು ಮಹಿಳೆ ಆರೋಪ ಮಾಡಿದ್ದು, ಆಸ್ಪತ್ರೆಯ ಸಿಬ್ಬಂದಿಯ ವರ್ತನೆಗೆ ಸಾರ್ವಜನಿಕರಿಂದ ಆಕ್ರೋಶ ವ್ಯಕ್ತವಾಗಿದೆ.