ಉಡುಪಿ: ರಸ್ತೆ ನಿರ್ಮಾಣ ವಿಚಾರಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಹಿಳೆ ನಡುವೆ ನಡೆದ ವಾಗ್ವಾದ ಸಂಘರ್ಷಕ್ಕೆ ತಿರುಗಿದ್ದು, ಇಬ್ಬರ ನಡುವೆ ರಸ್ತೆ ಮಧ್ಯೆಯೇ ಮಾರಾಮಾರಿ ನಡೆದ ಘಟನೆ ಉಡುಪಿಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆಯ ಆತ್ರಾಡಿಯಲ್ಲಿ ನಮ್ಮ ಜಾಗದಲ್ಲಿ ರಸ್ತೆ ನಿರ್ಮಾಣ ಬೇಡ ಎಂದು ಮಹಿಳೆಯೊಬ್ಬರು ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಕ್ಯಾತೆ ತೆಗೆದಿದ್ದಾರೆ. ಇದೇ ವಿಚಾರವಾಗಿ ಗ್ರಾಮ ಪಂಚಾಯಿತಿ ಸದಸ್ಯ ಹಾಗೂ ಮಹಿಳೆಯ ನಡುವೆ ಮಾತಿಗೆ ಮಾತು ಬೆಳೆದಿದೆ. ಕೋಪಗೊಂಡ ಮಹಿಳೆ ಪಂಚಾಯಿತಿ ಸದಸ್ಯ ಹಾಗೂ ಇನ್ನೋರ್ವ ವ್ಯಕ್ತಿಗೆ ಚಪ್ಪಲಿಯಿಂದ ಥಳಿಸಿದ್ದಾಳೆ.
ಸಿಟ್ಟಿಗೆದ್ದ ಪಂಚಾಯಿತಿ ಸದಸ್ಯ ತಕ್ಷಣ ತನ್ನ ಕೈಲಿದ್ದ ಛತ್ರಿ ಹಿಡಿಯಿಂದ ಮಹಿಳೆಯ ತಲೆಗೆ ಹೊಡೆದಿದ್ದಾರೆ. ನೂಕಾಟ ತಳ್ಳಾಟ ನಡೆದಿದ್ದು ಮಹಿಳೆ ಕೆಳಗೆ ಬಿದ್ದಿದ್ದಾರೆ. ಛತ್ರಿ ಹಿಡಿಯಿಂದ ಬಲವಾಗಿ ಏಟು ಬಿದ್ದ ಪರಿಣಾಮ ಮಹಿಳೆಯ ತಲೆಗೆ ಗಂಭೀರ ಗಾಯವಾಗಿದ್ದು ತಲೆಯಿಂದ ರಕ್ತ ಛಮ್ಮಿದೆ. ಅತ್ರಾಡಿ ಸಮೀಪದ ಪಡುಮನೆ ನಾಗಬನ ನಿವಾಸಿ ಆರತಿ (45) ಹಲ್ಲೆಗೊಳಗಾದ ಮಹಿಳೆ. ಮಹಿಳೆ ಹಾಗೂ ಗ್ರಾಮ ಪಂಚಾಯಿ ಸದಸ್ಯರ ನಡುವಿನ ಮಾರಾಮಾರಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.