alex Certify ವಿಶ್ವದ ಅತಿ ದೊಡ್ಡ ಟ್ವಿಸ್ಟಿಂಗ್​ ಟವರ್​ ಅನಾವರಣ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿಶ್ವದ ಅತಿ ದೊಡ್ಡ ಟ್ವಿಸ್ಟಿಂಗ್​ ಟವರ್​ ಅನಾವರಣ….!

ಸಾಮಾನ್ಯವಾಗಿ ಕಟ್ಟಡಗಳು ಲಂಬಾಕಾರದಲ್ಲಿರುತ್ತವೆ, ಹೆಚ್ಚೆಂದರೆ ಆಕರ್ಷಣೀಯವಾಗಿ ಕಾಣಲು ಒಂದಷ್ಟು ವೈವಿದ್ಯಮಯ ಎಲಿವೇಷನ್​ ಮಾಡಲಾಗಿರುತ್ತದೆ.

ಇದೀಗ ಚೈನಾದಲ್ಲಿ ವಿಶ್ವದ ಅತ್ಯಂತ ದೊಡ್ಡ ಟ್ವಿಸ್ಟಿಂಗ್​ ಟವರ್​ ಅನಾವರಣಗೊಂಡಿದೆ. ಅದರ ಎತ್ತರ ಬರೋಬ್ಬರಿ 580 ಅಡಿಗಳು.

ಈ ಟ್ವಿಸ್ಟಿಂಗ್​ ಟವರ್​ ಅನ್ನು ಇತ್ತೀಚೆಗೆ ಚಾಂಗ್​ಕಿಂಗ್​ನಲ್ಲಿ ಅನಾವರಣಗೊಳಿಸಲಾಗಿದೆ. ಗಗನಚುಂಬಿ ಕಟ್ಟಡವನ್ನು ವಾಸ್ತುಶಿಲ್ಪ ಕಂಪನಿ ಏಡಾಸ್​ ವಿನ್ಯಾಸಗೊಳಿಸಿದೆ. 39-ಅಂತಸ್ತಿನ ಟ್ವಿಸ್ಟಿಂಗ್​ ಟವರ್​ ಆ ಪ್ರದೇಶದ ಹೆಗ್ಗುರುತಾಗಿರಬೇಕೆಂದು ಉದ್ದೇಶಿಸಲಾಗಿದೆ. ಡ್ಯಾನ್ಸ್​ ಆಫ್​ ಲೈಟ್​ ಎಂಬ ಅಡ್ಡಹೆಸರು ಅದಕ್ಕಿದೆ.

ಆಕ್ಟಿರ್ಕ್​ ಮತ್ತು ಅಂಟಾಕ್ಟಿರ್ಕ್​ನಲ್ಲಿ ಸಾಮಾನ್ಯವಾಗಿ ಕಂಡುಬರುವ ಡ್ಯಾನ್ಸಿಂಗ್​ ಅರೋರಾ, ಸುರುಳಿಗಳಿಂದ ವಿನ್ಯಾಸಕರು ಸ್ಫೂರ್ತಿ ಪಡೆದಿದ್ದಾರೆ. ಆದ್ದರಿಂದ, ಕಟ್ಟಡದ ಅತಿವಾಸ್ತವಿಕ ತಿರುಚಿದ ಆಕಾರವನ್ನು ಎದ್ದುಕಾಣುವಲ್ಲಿ ಬೆಳಕು ಪ್ರಮುಖ ಪಾತ್ರ ವಹಿಸುತ್ತದೆ.

“ಕನಿಷ್ಠ” ವಿನ್ಯಾಸವು ಗಾಜಿನ ಪ್ಯಾನೆಲ್​ಗಳಿಂದ ಪ್ರತಿಫಲನ ಮತ್ತು ವಕ್ರೀಭವನದೊಂದಿಗೆ ಸಂಯೋಜಿಸಿದಾಗ, ಡ್ಯಾನ್ಸರ್​ ಆಕೃತಿಯನ್ನು ಸೂಚಿಸುವ ಅದ್ಭುತ ಬೆಳಕಿನ ಪ್ರದರ್ಶನವನ್ನು ವೀಕ್ಷಿಸಬಹುದು.

ಟ್ವಿಸ್ಟಿಂಗ್​ ಕಟ್ಟಡಗಳು ಪ್ರಪಂಚದಾದ್ಯಂತ ಸಾಕಷ್ಟು ಇವೆ. ಆದರೂ ಡ್ಯಾನ್ಸ್​ ಆಫ್​ ಲೈಟ್​ ಹಲವು ವಿಶೇಷತೆ ಹೊಂದಿದೆ. 8.8 ಡಿಗ್ರಿಗಳ ಟರ್ನಿಂಗ್​ ಆಂಗಲ್​ ಇದ್ದು, ಇದು ಇತರ ಗಗನಚುಂಬಿ ಕಟ್ಟಡಗಳಿಗಿಂತ ಸುಮಾರು 1.5 ಪಟ್ಟು ಹೆಚ್ಚು ಎಂದು ಗುರುತಿಸಲಾಗಿದೆ.

ವಿಶ್ವದ ಮೊದಲ ಟರ್ನಿಂಗ್​ ಟವರ್​ ಸ್ವೀಡನ್​ನಲ್ಲಿ ಅನಾವರಣಗೊಗೊಂಡಿತ್ತು, ಅದನ್ನು ದಿ ಟರ್ನಿಂಗ್​ ಟೋರ್ಸೊ ಎಂದು ಕರೆದಿದ್ದು, ಸ್ಪ್ಯಾನಿಷ್​ ವಾಸ್ತುಶಿಲ್ಪಿ ಸ್ಯಾಂಟಿಯಾಗೊ ಕ್ಯಾಲಟ್ರಾವಾ ವಿನ್ಯಾಸಗೊಳಿಸಿದ ಈ ಅದ್ಭುತ ವಾಸ್ತುಶಿಲ್ಪವನ್ನು 2005 ರಲ್ಲಿ ಮಾಲ್ಮೋದಲ್ಲಿ ನಿರ್ಮಿಸಲಾಗಿತ್ತು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...