ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗುತ್ತಿದೆ. ಇದರ ಪರಿಣಾಮ ಆಸ್ತಿಪಾಸ್ತಿ ನಷ್ಟದ ಜೊತೆಗೆ ಬೆಳೆಯೂ ನಾಶವಾಗಿದೆ. ಅಲ್ಲದೆ ಜೀವ ಹಾನಿಯೂ ಸಂಭವಿಸಿದ್ದು, ಇದರ ಮಧ್ಯೆ ಮಳೆ ಇನ್ನಷ್ಟು ಕಾಲ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿರುವುದು ಆತಂಕಕ್ಕೆ ಕಾರಣವಾಗಿದೆ.
ಅದರಲ್ಲೂ ರಾಜ್ಯ ರಾಜಧಾನಿ ಬೆಂಗಳೂರು ಜನತೆ, ಮಳೆಯ ಪರಿಣಾಮ ಇನ್ನಿಲ್ಲದಂತೆ ತತ್ತರಿಸಿ ಹೋಗಿದ್ದು, ಅವೈಜ್ಞಾನಿಕ ರಾಜ ಕಾಲುವೆ ನಿರ್ಮಾಣದಿಂದ ಪ್ರಮುಖ ರಸ್ತೆಗಳು ಕೆರೆಗಳಂತಾಗಿವೆ. ಬಡಾವಣೆಗಳಲ್ಲಿ ನೀರು ಮನೆಗಳಿಗೆ ನುಗ್ಗಿದ್ದು, ಜನ ಹೊರಬರಲು ಹರಸಾಹಸ ಪಡುವಂತಾಗಿದೆ. ಸ್ಥಳೀಯ ಸಂಸ್ಥೆಯನ್ನೂ ಶಪಿಸುತ್ತಲೇ ಜನತೆ ನಿಟ್ಟುಸಿರುಬಿಡುತ್ತಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಮಳೆ ಅವಾಂತರದ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೂ ಸಹ ನೀರು ನಿಂತಿದ್ದು, ವಿದೇಶಿ ಪ್ರಯಾಣಿಕರು ಅಪಹಾಸ್ಯ ಮಾಡುವಂತಾಗಿದೆ. ಬೆಂಗಳೂರಿನ ಸದ್ಯದ ಪರಿಸ್ಥಿತಿಯ ಕೆಲ ಫೋಟೋಗಳು ಇಲ್ಲಿವೆ.