ಬೆಂಗಳೂರು: ಜಲ ಗಂಡಾಂತರ ಸಂಭವಿಸುತ್ತದೆ, ಭೂಕಂಪ, ಬೆಂಕಿ ಅನಾಹುತಗಳು ಹೆಚ್ಚುತ್ತವೆ ಎಂದು ಹೇಳಿದ್ದ ಕೋಡಿ ಶ್ರೀಗಳ ಭವಿಷ್ಯ ನಿಜವಾಗುತ್ತಾ ಎಂಬ ಆತಂಕ ಶುರುವಾಗಿದೆ.
ಕೆಲ ದಿನಗಳ ಹಿಂದೆ ಕೋಡಿ ಮಠದ ಶ್ರೀಗಳು ಆಶ್ವಯುಜ, ಕಾರ್ತಿಕದಲ್ಲಿ ದೇಶಕ್ಕೆ ಕಷ್ಟ ಎದುರಾಗಲಿದೆ. ಜಲಭಾದೆ ದ್ವಿಗುಣಗೊಳ್ಳಲಿದ್ದು, ಭೂಕಂಪ, ಬೆಂಕಿ ಅನಾಹುತಗಳು ಹೆಚ್ಚುತ್ತವೆ. ಬಯಲುಸೀಮೆ ಮಲೆನಾಡಾಗುತ್ತದೆ. ಮಲೆನಾಡು ಬಯಲುಸೀಮೆಯಂತಾಗುತ್ತದೆ. ಮೇಘಸ್ಫೋಟ ಸಂಭವಿಸುತ್ತದೆ, ಭೂಮಿ ನಡುಗುತ್ತದೆ ಎಂದು ಭವಿಷ್ಯ ನುಡಿದಿದ್ದರು.
ರಾಜ್ಯದಲ್ಲಿ ಸಂಭವಿಸುತ್ತಿರುವ ರಣ ಮಳೆ, ಪ್ರವಾಹ ಪರಿಸ್ಥಿತಿ ಗಮನಿಸಿದರೆ ಕೋಡಿ ಶ್ರೀಗಳ ಭವಿಷ್ಯ ನಿಜವಾಗುತ್ತಾ ಎಂಬ ಪ್ರಶ್ನೆ ಮೂಡುತಿದೆ. ಈಗಾಗಲೇ ರಾಜಧಾನಿ ಬೆಂಗಳೂರಿನಲ್ಲಿ 50 ವರ್ಷಗಳಲ್ಲೇ ದಾಖಲೆ ಮಳೆಯಾಗಿದ್ದು ವರುಣಾರ್ಭಟಕ್ಕೆ ಜನರು ಕಂಗೆಟ್ಟು ಹೋಗಿದ್ದಾರೆ. ಇನ್ನು ರಾಜ್ಯದಲ್ಲಿ ಇನ್ನೂ 3-4 ದಿನಗಳ ಕಾಲ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಸ್ವಾಮೀಜಿ ಭವಿಷ್ಯ ನುಡಿದಂತೆ ಆಗಲಿದೆಯೇ ಎಂಬ ಪ್ರಶ್ನೆ ಮೂಡುತ್ತಿದೆ.