alex Certify ಅಶುಭಕ್ಕೆ ಕಾರಣವಾಗುತ್ತದೆ ಮನೆಯಲ್ಲಿರುವ ಈ ಗಿಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶುಭಕ್ಕೆ ಕಾರಣವಾಗುತ್ತದೆ ಮನೆಯಲ್ಲಿರುವ ಈ ಗಿಡ

ಮನೆಯ ಸುತ್ತ ಮುತ್ತ ಮರಗಳಿರುವುದು ಸಕಾರಾತ್ಮಕತೆಯ ಸಂಕೇತ. ವಾಸ್ತು ಶಾಸ್ತ್ರ ಹಾಗೂ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯ ಮುಂದಿರುವ ಕೆಲ ಮರಗಳು ಸುಖ-ಸಮೃದ್ಧಿಯನ್ನು ನೀಡುತ್ತವೆ. ಹಾಗೆ ಕೆಲವೊಂದು ಗಿಡಗಳು ತಾನಾಗಿಯೇ ಬೆಳೆದು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತವೆ. ಇದ್ರಲ್ಲಿ ಅಶ್ವತ್ಥ ಮರ ಕೂಡ ಒಂದು. ಇದನ್ನು ಮನೆಯೊಳಗಿಟ್ಟುಕೊಳ್ಳುವುದು ಅಶುಭಕ್ಕೆ ಕಾರಣವಾಗುತ್ತದೆ. ವಿನಾಶಕ್ಕೆ ದಾರಿ ಮಾಡಿಕೊಡುತ್ತದೆ.

ಮನೆಯ ಬಳಿ ಅಥವಾ ಮನೆಯೊಳಗೆ ಅಶ್ವತ್ಥ ಗಿಡವಿರುವುದರಿಂದ ಕುಟುಂಬದ ಸದಸ್ಯರು ನೆಮ್ಮದಿಯಾಗಿರಲು ಸಾಧ್ಯವಿಲ್ಲ. ದಿನಕ್ಕೊಂದು ಸಮಸ್ಯೆ ಹುಟ್ಟಿಕೊಳ್ಳುತ್ತದೆ. ಮನೆ ಮೇಲೆ ಇದ್ರ ನೆರಳು ಬಿದ್ರೂ ಅಭಿವೃದ್ಧಿ ಕಷ್ಟಸಾಧ್ಯ. ವೈವಾಹಿಕ ಜೀವನ ದುಃಖಮಯವಾಗುತ್ತದೆ.

ಒಂದು ವೇಳೆ ಮನೆ ಬಳಿ ಅಶ್ವತ್ಥ ಗಿಡವಿದ್ದರೆ ಅದನ್ನು ಕತ್ತರಿಸಬಾರದು. ಇದು ಹಿರಿಯರಿಗೆ ನಷ್ಟವುಂಟು ಮಾಡುತ್ತದೆ. ನಿರ್ದಿಷ್ಟ ಕೆಲಸಕ್ಕೆ ಅಥವಾ ಪೂಜೆಗೆ ಕತ್ತರಿಸಿದ್ರೆ ಯಾವುದೇ ಅಪಾಯವಿಲ್ಲ. ಅಶ್ವತ್ಥ ಮರವನ್ನು ಕತ್ತರಿಸುವುದು ಅವಶ್ಯವಾದಲ್ಲಿ ಭಾನುವಾರ ಕತ್ತರಿಸಬೇಕು. ಸೂಕ್ತ ಸಲಹೆ ಮೇರೆಗೆ ಕತ್ತರಿಸುವುದು ಉತ್ತಮ.

ಮನೆಯ ಪೂರ್ವ ಭಾಗಕ್ಕೆ ಅಶ್ವತ್ಥ ಮರವಿದ್ದರೆ ಭಯ ಹಾಗೂ ಬಡತನ ಮನೆಯನ್ನು ಕಾಡುತ್ತದೆ. ಅಶ್ವತ್ಥ ಮರದಲ್ಲಿ ಎಲ್ಲ ದೇವಾನುದೇವತೆಗಳು ನೆಲೆಸಿವೆ ಎಂದು ನಂಬಲಾಗಿದೆ. ಅದನ್ನು ದೇವರೆಂದು ಪೂಜೆ ಮಾಡಲಾಗುತ್ತದೆ. ನಿಯಮಿತವಾಗಿ ಪೂಜೆ, ಪ್ರದಕ್ಷಣೆ ಮಾಡಿದ್ರೆ ಶುಭ ಫಲ ಪ್ರಾಪ್ತಿಯಾಗುತ್ತದೆ. ಆದ್ರೆ ದೇವರು ನೆಲೆಸಿರುವ ಗಿಡವನ್ನು ಮನೆಯೊಳಗೆ ಅಥವಾ ಮನೆಯ ಆಸು-ಪಾಸು ಇಟ್ಟುಕೊಳ್ಳುವುದು ಶುಭವಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...