ಬೆಂಗಳೂರು: ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕೊಪ್ಪಳದ ಕನಕಗಿರಿ ಶಾಸಕ ಬಸವರಾಜ ದಡೇಸಗೂರು ಅವರ ಆಡಿಯೋ ವೈರಲ್ ಆಗಿದ್ದು, ಈ ಬಗ್ಗೆ ಶಾಸಕ ಬಸವರಾಜ್ ದಡೇಸಗೂರು ಪ್ರತಿಕ್ರಿಯೆ ನೀಡಿದ್ದಾರೆ.
ವೈರಲ್ ಆಗಿರುವ ಆಡಿಯೋ ನನ್ನದೇ. ಪ್ರಕರಣದ ಮಧ್ಯಸ್ಥಿಕೆ ವಹಿಸಲು ನನ್ನೊಂದಿಗೆ ಮಾತನಾಡಿದ್ದರು. ನಾನು ಸಮಸ್ಯೆ ಬಗೆಹರಿಸುವುದಾಗಿ ಹೇಳಿದ್ದೆ. ಆದರೆ ನಾನು ಇದರಲ್ಲಿ ಹಣ ಪಡೆದಿಲ್ಲ. ಇದು ವಿಪಕ್ಷದವರ ಷಡ್ಯಂತ್ರ ಎಂದು ಹೇಳಿದ್ದಾರೆ.
ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಯಾರೋ ರೆಕಾರ್ಡ್ ಮಾಡಿ ಆಡಿಯೋ ವೈರಲ್ ಮಾಡಿದ್ದಾರೆ. ನಾನು ಸರ್ಕಾರಕ್ಕೆ ಹಣ ಕೊಟ್ಟಿದ್ದೇನೆ ಎಂದು ಹೇಳಿಲ್ಲ. ನಾನು ಕೂಡ ಯಾವ ಹಣ ಪಡೆದಿಲ್ಲ ಎಂದು ತಿಳಿಸಿದ್ದಾರೆ.
ಪಿಎಸ್ಐ ನೇಮಕಾತಿ ಅಕ್ರಮದ ಕುರಿತು ಶಾಸಕರ ಆಡಿಯೋ ವೈರಲ್ ಆಗಿದ್ದು, ನೌಕರಿ ಕೊಡಿಸುವುದಾಗಿ ಹೇಳಿ 15 ಲಕ್ಷ ಹಣ ಪಡೆದ ಬಗ್ಗೆ ಆಡಿಯೋ ಸಂಭಾಷಣೆಯಲ್ಲಿ ತಿಳಿದುಬಂದಿದೆ. ಬಳ್ಳಾರಿ ಮೂಲದ ಪರಸಪ್ಪ ಎಂಬ ವ್ಯಕ್ತಿಯ ಮಗನಿಂದ ಹಣ ಪಡೆದಿದ್ದು, ಪರಸಪ್ಪ ಜತೆ ಈ ಬಗ್ಗೆ ಶಾಸಕರು ಸಂಭಾಷಣೆ ನಡೆಸಿರುವ ಆಡಿಯೋ ವೈರಲ್ ಆಗಿದೆ.