ಬಳ್ಳಾರಿ: 10 ವರ್ಷದ ಬಾಲಕ ಹೊಂಡದಲ್ಲಿ ಈಜಲು ಹೋಗಿ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಬಳ್ಳಾರಿ ಜಿಲೆಯ ಸಿರವಾರ ಗ್ರಾಮದಲ್ಲಿ ನಡೆದಿದೆ.
ಈಜಲು ಹೋದ ಬಾಲಕ ಸುರೇಶ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಬಾಲಕ ಸಾವನ್ನಪ್ಪಿದ್ದರೂ ಮತ್ತೆ ಬದುಕಿ ಬರುತ್ತಾನೆ ಎಂದು ಮೂಢನಂಬಿಕೆಯಲ್ಲಿ ಬಾಲಕನ ಶವವನ್ನು ಉಪ್ಪಿನಲ್ಲಿ ಇಟ್ಟು ಗ್ರಾಮಸ್ಥರು ಕಾದು ಕುಳಿತ ಪ್ರಸಂಗವೂ ನಡೆದಿದೆ.
ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಮೆಸೇಜ್ ನೋಡಿ ಬಾಲಕನನ್ನು ಬದುಕಿಸಲು 4 ಗಂಟೆಗಳ ಕಾಲ ಉಪ್ಪಿನಲ್ಲಿ ಶವವನ್ನು ಮುಚ್ಚಿಟ್ಟಿದ್ದಾರೆ. ಆದರೆ ಬಾಲಕ ಮೆಲೇಳಲೇ ಇಲ್ಲ. ಇದರಿಂದ ಕುಟುಂಬದವರು ಮತ್ತಷ್ಟು ನಿರಾಶರಾಗಿ ಕಣ್ಣೀರಿಟ್ಟಿದ್ದಾರೆ.