alex Certify ಸಲಹೆ ಕೊಟ್ಟು ಸಿಕ್ಕಿಕೊಂಡ ಸ್ನೇಹಿತ; ಹಾಸ್ಯದ ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸಲಹೆ ಕೊಟ್ಟು ಸಿಕ್ಕಿಕೊಂಡ ಸ್ನೇಹಿತ; ಹಾಸ್ಯದ ವಿಡಿಯೋ ವೈರಲ್​

ಸಾಮಾಜಿಕ ಜಾಲತಾಣದಲ್ಲಿ ನಗು ತರಿಸುವ ಅನೇಕ ವಿಡಿಯೋಗಳು ಬರುತ್ತಿರುತ್ತವೆ. ಈ ಸರಣಿಯಲ್ಲಿ ಹೊಸ ವಿಡಿಯೋವೊಂದು ನೆಟ್ಟಿಗರನ್ನು ಬಹಳ ಖುಷಿಪಡಿಸಿದೆ.

ಒಬ್ಬ ವ್ಯಕ್ತಿ ತನ್ನ ಸ್ನೇಹಿತನೊಂದಿಗೆ ಅಡ್ಜೆಸ್ಟ್​ ಮೆಂಟ್​ ಮಾಡಿಕೊಳ್ಳುವ ಸವಾಲನ್ನು ಸ್ವೀಕರಿಸಿ ಪ್ರಯತ್ನಿಸುತ್ತಿರುವುದನ್ನು ವಿಡಿಯೊ ತೋರಿಸಿದೆ.

ತನ್ನ ಸ್ನೇಹಿತನಿಗೆ ಕೋಳಿಯಂತೆ ಕುಣಿಯಲು ಅವನ ಕಾಲುಗಳ ಕೆಳಗೆ ಕೈ ಹಾಕಲು ಹೇಳುತ್ತಾನೆ. ನಂತರ ಅವನು ಅದೇ ರೀತಿ ನಟಿಸುತ್ತಾನೆ. ಆದರೆ ಅವನೊಂದಿಗೆ ಚಾಲೆಂಜ್​ ಮಾಡುವ ಬದಲು, ಆತ ತನ್ನ ಸ್ನೇಹಿತನನ್ನು ಚಿಕ್ಕ ಮಗುವಿನಂತೆ ಎತ್ತಿಕೊಂಡು ಮರಕ್ಕೆ ಹತ್ತಿಬಿಡುತ್ತಾನೆ.

ಆಗ ನೋಡಿ ಪರದಾಟ. ಸವಾಲು ಹಾಕಿದವನ ಸ್ಥಿತಿ. ಮರದಿಂದ ಇಳಿಯಲು ಆಗದೇ ಪರದಾಡುತ್ತಾನೆ. ಆತ ತನ್ನನ್ನು ಬಿಡಿಸಿಕೊಳ್ಳಲು ಪ್ರಯತ್ನಿಸಿದರೆ, ಅವನು ಮರದಿಂದ ಬೀಳಬಹುದು. ಈ ದೃಶ್ಯವನ್ನು ನೋಡಿದ ಸುತ್ತಮುತ್ತಲಿನವರಿಗೆ ನಗು ತಡೆಯಲಾಗಲಿಲ್ಲ.

ನೆಟ್ಟಿಗರು ಈ ವಿಡಿಯೋ ನೋಡಿ ಅನೇಕ ಉದಾಹರಣೆಗಳನ್ನು ಕೊಟ್ಟು ನಕ್ಕು ನಲಿದಿದ್ದಾರೆ. ಕೆಲವರು ತಮ್ಮ ಉದಾಹರಣೆಗಳನ್ನು ಸಹ ಕೊಟ್ಟಿದ್ದಾರೆ.

https://www.instagram.com/p/CiEhBF-J1yY/?utm_source=ig_embed&utm_campaign=invalid&ig_rid=6ea237e3-d9f2-464e-bd53-df0358fd1d73

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...