ಬೆಂಗಳೂರು: ಅಕ್ರಮ ಸಂಬಂಧವಿದೆ ಎಂದು ಕಾಟ ಕೊಡುತ್ತಿದ್ದ ಗಂಡನ ಕೊಲೆ ಮಾಡಿದ ಪತ್ನಿ ಹಾಗೂ ಆಕೆಯ ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.
ಮಹೇಶ್ ಕೊಲೆಯಾದ ವ್ಯಕ್ತಿ. ಆತನ ಪತ್ನಿ ಶಿಲ್ಪಾ ಹಾಗೂ ಶಿಲ್ಪಾ ಅಕ್ಕನ ಮಗ ಮಹೇಶ್ ಕೃತ್ಯವಸಗಿದ್ದಾರೆ. ಈ ಕೊಲೆಗೆ ಶಿಲ್ಪಾ ತಾಯಿ ಕೂಡ ಸಹಕರಿಸಿದ್ದು, ಆಕೆಯನ್ನು ಕೂಡ ಬಂಧಿಸಲಾಗಿದೆ.
ಕೋಣನಕುಂಟೆ ಠಾಣೆ ಪೊಲೀಸರು ಶಿಲ್ಪಾ ಮತ್ತು ಶಿಲ್ಪಾ ಅವರ ತಾಯಿಯನ್ನು ಬಂಧಿಸಿದ್ದು, ಆರೋಪಿ ಮಹೇಶ್ ಪರಾರಿಯಾಗಿದ್ದಾನೆ.
ಮಂಡ್ಯ ಮೂಲದ ಮಹೇಶ್ ಮತ್ತು ಶಿಲ್ಪಾ 8 ವರ್ಷಗಳ ಹಿಂದೆ ಮದುವೆಯಾಗಿದ್ದು, ಕೋಣನಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ನಂತರ ಮಂಡ್ಯದಲ್ಲಿದ್ದ ಮಹೇಶ್ ಆಗಾಗ ಬೆಂಗಳೂರಿಗೆ ಬಂದು ಹೋಗುತ್ತಿದ್ದ. ಪತ್ನಿಯೊಂದಿಗೆ ಜಗಳವಾಡುತ್ತಿದ್ದ. ಆಕ್ರಮ ಸಂಬಂಧ ಇದೆ ಎಂದು ಕಾಟ ಕೊಡುತ್ತಿದ್ದ. ಈ ಬಗ್ಗೆ ಶಿಲ್ಪಾ ತನ್ನ ತಾಯಿಗೆ ತಿಳಿಸಿದ್ದು, ಅವರು ಹಿರಿಯ ಮಗಳ ಮಗ ಮಹೇಶನಿಗೆ ವಿಚಾರ ತಿಳಿಸಿದ್ದಾರೆ. ಬುದ್ಧಿ ಹೇಳಲು ಬಂದ ಮಹೇಶ ಚಿಕ್ಕಮ್ಮನ ಪತಿ ಮಹೇಶ್ ಮೇಲೆ ಹಲ್ಲೆ ಮಾಡಿದ್ದು, ಮಹೇಶ್ ಮೃತಪಟ್ಟಿದ್ದಾನೆ.
ನಂತರ ಮೂರ್ಛೆ ರೋಗದಿಂದ ಮಹೇಶ್ ಮೃತಪಟ್ಟಿರುವುದಾಗಿ ಹುಟ್ಟೂರಿಗೆ ಮೃತದೇಹ ತೆಗೆದುಕೊಂಡು ಹೋಗಲಾಗಿದೆ. ಮೃತದೇಹದ ಮೇಲೆ ಗಾಯದ ಗುರುತುಗಳು ಇರುವುದನ್ನು ಗಮನಿಸಿದ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಂಡ್ಯ ಪೊಲೀಸರು ಪರಿಶೀಲನೆ ನಡೆಸಿದಾಗ ಕೊಲೆ ಮಾಡಿರುವುದು ಬೆಳಕಿಗೆ ಬಂದಿದ್ದು, ಪ್ರಕರಣವನ್ನು ಕೋಣನಕುಂಟೆ ಠಾಣೆಗೆ ವರ್ಗಾಯಿಸಲಾಗಿತ್ತು.