ಅಲಿಗಢದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಗಣೇಶ ಉತ್ಸವದ ಅಂಗವಾಗಿ ಏಳು ದಿನಗಳ ಕಾಲ ಗಣಪತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿದ್ದಾರೆ.
ರೋರವಾರ ಪೊಲೀಸ್ ವೃತ್ತದ ಎಡಿಎ ಕಾಲೋನಿ ನಿವಾಸಿ ರೂಬಿ ಆಸಿಫ್ ಖಾನ್ ಎಂಬುವರು ತಮ್ಮ ಮನೆಗೆ ಗಣೇಶ ಮೂತಿರ್ಯನ್ನು ತಂದು ಸಕಲ ಪೂಜಾ ವಿಧಿ ವಿಧಾನ ನೆರವೇರಿಸಿರುವುದು ವಿಶೇಷವಾಗಿದೆ.
ನಾವು ಸೆಪ್ಟೆಂಬರ್ 6 ರಂದು ಗಣಪತಿ ವಿಸರ್ಜನೆ ಮಾಡುತ್ತೇವೆ. ಏಳು ದಿನವೂ ನಾನು ಮತ್ತು ನನ್ನ ಕುಟುಂಬವು ಪ್ರತಿದಿನ ವಿಧಿವಿಧಾನಗಳ ಪ್ರಕಾರ ‘ಪೂಜೆ’ ಮಾಡುತ್ತೇನೆ ಮತ್ತು ಭಗವಂತನಿಗೆ ‘ಮೋದಕ’ಗಳನ್ನು ಅರ್ಪಿಸುತ್ತೇವೆ” ಎಂದು ಅವರು ಹೇಳಿಕೊಂಡಿದ್ದಾರೆ.
ತನಗೆ ಗಣೇಶನ ಮೇಲೆ ಅಪಾರ ನಂಬಿಕೆಯಿದ್ದು, ತನ್ನ ಮನೆಯವರೂ ಗಣೇಶನನ್ನು ಮನೆಗೆ ಕರೆತರುವುದನ್ನು ವಿರೋಧಿಸಲಿಲ್ಲ ಎಂದು ರೂಬಿ ಹೇಳಿದ್ದಾರೆ. ತಮ್ಮ ಕುಟುಂಬವು ಎಲ್ಲಾ ಹಬ್ಬಗಳನ್ನು ಧರ್ಮದ ಭೇದವಿಲ್ಲದೆ ಆಚರಿಸುತ್ತೇವೆ. ಪತಿ ಆಸಿಫ್ ಖಾನ್ ನನ್ನ ನಂಬಿಕೆಯನ್ನು ಬೆಂಬಲಿಸಿದ್ದಾರೆ ಎಂದು ವಿವರಿಸಿದ್ದಾರೆ.