111 ವರ್ಷಗಳ ಹಿಂದೆ ಬಲ್ಗೇರಿಯಾದಲ್ಲಿ ಜನಿಸಿದ ಬಾಬಾ ವಂಗಾ ಎಂಬ ಮಹಿಳೆಯ ಅನೇಕ ಭವಿಷ್ಯವಾಣಿಗಳು ನಿಜವಾಗುತ್ತಿವೆ ಎಂದು ನಂಬಲಾಗಿದೆ. ಜಗತ್ತೇ ಆಕೆ ಹೇಳಿದ ಭವಿಷ್ಯದ ಬಗ್ಗೆ ಚರ್ಚೆ ನಡೆಸುತ್ತಿದೆ.
ಬಾಬಾ ವಂಗಾ ತನ್ನ 12 ನೇ ವಯಸ್ಸಿನಲ್ಲಿ ಚಂಡಮಾರುತದಲ್ಲಿ ತನ್ನ ದೃಷ್ಟಿಯನ್ನು ಕಳೆದುಕೊಂಡರು. ಆಕೆ ನೀಡಿದ ಭವಿಷ್ಯವಾಣಿಯಿಂದ ಪ್ರಪಂಚದಾದ್ಯಂತ ಪ್ರಸಿದ್ಧರಾಗಿದ್ದಾರೆ.
ಆಕೆಯ ಮರಣದ ಮೊದಲು 2022 ಮತ್ತು ಅದರಾಚೆಗೆ ಅನೇಕ ಪ್ರಮುಖ ಭವಿಷ್ಯವಾಣಿಗಳನ್ನು ನುಡಿದಿದ್ದಾರೆ. 2022 ರಲ್ಲಿ ಭಾರತದಲ್ಲಿ ಮಿಡತೆಗಳ ದಾಳಿ ಇರಬಹುದು. ಇದರ ಹೊರತಾಗಿ, ಕ್ಷಾಮದಂತಹ ಸಮಸ್ಯೆಗಳು ಸಹ ಬರಬಹುದು. 2023 ರಲ್ಲಿ ಭೂಮಿಯು ತನ್ನ ಕಕ್ಷೆಯನ್ನು ಬದಲಾಯಿಸುತ್ತದೆ. ಇದರ ಹೊರತಾಗಿ, ಗಗನಯಾತ್ರಿಗಳು 2028 ರಲ್ಲಿ ಶುಕ್ರಕ್ಕೆ ಪ್ರಯಾಣಿಸುತ್ತಾರೆ. 2046 ರಲ್ಲಿ, ಮಾನವರು ಸಂಶೋಧನಾ ಕ್ಷೇತ್ರದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ. ಅಂಗಾಂಗ ಕಸಿ ಮತ್ತು ಅದರ ಸಹಾಯದಿಂದ ಜನರು 100 ವರ್ಷಗಳಿಗಿಂತ ಹೆಚ್ಚು ಬದುಕಲು ಸಾಧ್ಯವಾಗುತ್ತದೆ. ಕೊನೆಯದಾಗಿ ಶಾಕಿಂಗ್ ಎಂದರೆ 2100 ರಲ್ಲಿ ಭೂಮಿಯ ಮೇಲೆ ರಾತ್ರಿ ಇರುವುದಿಲ್ಲ. ಭೂಮಿಯು ಕೃತಕ ಸೂರ್ಯನ ಬೆಳಕಿನಿಂದ ಪ್ರಕಾಶಿಸಲ್ಪಡುತ್ತದೆ ಎಂದು ಮಹತ್ವದ ಭವಿಷ್ಯಗಳನ್ನು ನುಡಿದಿದ್ದಾರೆ.
ಅವರು ಪ್ರಪಂಚದ ಅಂತ್ಯದ ಕುರಿತೂ ಭವಿಷ್ಯ ನುಡಿದಿದ್ದಾರೆ. ಪ್ರಪಂಚವು 5079 ರಲ್ಲಿ ಅಂತ್ಯಗೊಳ್ಳುತ್ತದೆ. ಬಾಬಾ ವಂಗಾ ಅವರು 2022ನೇ ವರ್ಷಕ್ಕೆ ಹೇಳಿದ ಎರಡು ಭವಿಷ್ಯವಾಣಿಗಳು ನಿಜವಾಗಿವೆ. ಏಷ್ಯಾ ಮತ್ತು ಆಸ್ಟ್ರೇಲಿಯಾದ ಕೆಲವು ಭಾಗಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಿದ್ದರು, ಅದು ನಿಜವಾಗಿದೆ.
ಆಸ್ಟ್ರೇಲಿಯಾ, ಈಶಾನ್ಯ ಭಾರತ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್ನಲ್ಲಿ ಪ್ರವಾಹ ಏಕಾಏಕಿ ಕಾಣಿಸಿಕೊಂಡಿದೆ. ಇದಲ್ಲದೇ ಪಾಕಿಸ್ತಾನದಲ್ಲಿ ಪ್ರವಾಹದ ಹಾವಳಿ ಮುಂದುವರಿದಿದೆ. ಯುರೋಪ್ನಲ್ಲಿ ಬರಗಾಲದ ಸಮಸ್ಯೆ ಕುರಿತು ಭವಿಷ್ಯ ನುಡಿದಿದ್ದರು. ಈ ವರ್ಷ ಯುರೋಪ್ನ ಪೋರ್ಚುಗಲ್ನಲ್ಲಿ, ಸರ್ಕಾರವು ನೀರಿನ ಬಳಕೆಯನ್ನು ಮಿತಿಗೊಳಿಸಲು ತನ್ನ ನಾಗರಿಕರನ್ನು ಕೇಳಿದೆ. ಇದಲ್ಲದೇ ಇಟಲಿಯಲ್ಲಿಯೂ ನೀರಿನ ಅಭಾವ ಕಾಣಿಸಿಕೊಂಡಿದೆ. ಇಟಲಿ 1950 ರ ದಶಕದ ನಂತರ ಅತ್ಯಂತ ತೀವ್ರವಾದ ಬರ ಸಮಸ್ಯೆಯನ್ನು ಎದುರಿಸುತ್ತಿದೆ.