ಅಪರಾಧಿಗಳಿಗೆ ಜೈಲಿನಲ್ಲಿ ಊಟದ ಬಗ್ಗೆ ನಿಮಗೆ ಸ್ಪೆಷಲ್ ಹೇಳ್ಬೇಕಾಗಿಲ್ಲ. ಟಿವಿ, ಸಿನೆಮಾಗಳಲ್ಲಿ ತೋರಿಸೋ ರೀತಿ ನೋಡ್ತಿದ್ರೆನೇ ವಾಕರಿಕೆ ಬಂದು ಬಿಡುತ್ತೆ. ಹಾಗಂತ ನಿಜವಾದ ಜೈಲೂಟ ಅಷ್ಟೆ ಕೆಟ್ಟದಾಗಿ ಇರುತ್ತೆ ಅಂತ ಅರ್ಥವೂ ಅಲ್ಲ.
ಇತ್ತೀಚೆಗೆ ಉತ್ತರಪ್ರದೇಶದ ಫರೂಕಾಬಾದ್ ಜಿಲ್ಲೆಯ ಫತೇಘರ್ ಸೆಂಟ್ರಲ್ ಜೈಲಿನ ಆಹಾರದ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಈ ಜೈಲಿನಲ್ಲಿರುವ 1,100 ಕ್ಕೂ ಹೆಚ್ಚು ಕೈದಿಗಳಿಗೆ ನೀಡಲಾದ ಆಹಾರದ ಗುಣಮಟ್ಟವು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದಿಂದ (FSSAI) ‘‘ಫೈವ್‌ಸ್ಟಾರ್ “ ಎಂದು ರೇಟ್ ಮಾಡಿದೆ.
FSSAIನಿಂದ ಸ್ವೀಕರಿಸಲಾದ ಪ್ರಮಾಣ ಪತ್ರವು, “ಭಾರತೀಯ ಆಹಾರ ಸುರಕ್ಷತೆ ಪ್ರಕಾರ ಜಿಲ್ಲಾ ಕಾರಾಗೃಹ ಫತೇಘರ್, ಫರೂಕಾಬಾದ್ ಅನ್ನು ಈಟ್ ರೇಟ್ ಕ್ಯಾಂಪಸ್ ಎಂದು ಪ್ರಮಾಣೀಕರಿಸಲಾಗಿದೆ“ ಎಂದು ಹೇಳಲಾಗಿದೆ. ಹೇಳಿಕೆಯ ನಂತರ 5-ಸ್ಟಾರ್ ರೇಟಿಂಗ್ ಮತ್ತು ಪ್ರಮಾಣ ಪತ್ರದಲ್ಲಿ ‘ಅತ್ಯುತ್ತಮ‘ ಎಂದು ಬರೆಯಲಾಗಿದೆ. ಇದು ಆಗಸ್ಟ್ 18, 2024 ರವರೆಗೆ ಮಾನ್ಯವಾಗಿರುತ್ತದೆ.
ಪ್ರಮಾಣಪತ್ರವನ್ನು ಪಡೆಯುವ ಮೊದಲು ಮೊದಲೇ ನಿರ್ಧರಿಸಲಾಗಿರುವ ಹಾಗೆ ಶುಚಿತ್ವ, ಆಹಾರದ ಗುಣಮಟ್ಟ, ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳತ್ತ ಗಮನ ಕೊಡಲಾಗಿದೆ. ಇನ್ನೂ ಎಫ್‌ಎಸ್‌ಎಸ್‌ಎಐ ಪ್ರಮಾಣೀಕೃತ ಅಂಗಡಿಗಳಿಂದ ಸಂಗ್ರಹಿಸುವುದು ಮತ್ತು ಉತ್ತಮ ನಡವಳಿಕೆಯ ಆಹಾರ ತಯಾರಿಕಾ ಸಿಬ್ಬಂದಿ ಸೇರಿದ್ದಾರೆ ಎಂದು ಅವರು ಹೇಳಿದರು. ಜೈಲಿನಲ್ಲಿ ಸಸ್ಯಾಹಾರ ನೀಡಲಾಗುತ್ತದೆ ಎಂದರು.
ಬೆಳಗಿನ ಉಪಾಹಾರದಲ್ಲಿ ಎರಡು ದಿನ ಅನ್ನ, ಎರಡು ದಿನ ರೊಟ್ಟಿ, ಮೂರು ದಿನ ಗಂಜಿ ಪ್ಲಾನ್‌ನಲ್ಲಿ ಇರಿಸಲಾಗಿದೆ ಎಂದ ಅವರು, ಭಾನುವಾರದ ಊಟದಲ್ಲಿ ಮೊದಲ, ಮೂರನೇ ಹಾಗೂ ಕೊನೆಯ ದಿನ ಸಂಜೆ. ಪೂರಿ, ಪಲ್ಯ ಮತ್ತು ಸಿಹಿಯನ್ನ ಬಡಿಸಲಾಗುತ್ತದೆ. ಇನ್ನೂ ಎರಡನೇ ಭಾನುವಾರದಂದು, ಅನ್ನ-ಸಾರನ್ನ ಮೆನುವಿನಲ್ಲಿ ಸೇರಿಸಲಾಗಿದೆ.”
ಪ್ರಸ್ತುತ ಜಿಲ್ಲಾ ಕಾರಾಗೃಹದಲ್ಲಿ 1,144 ಕೈದಿಗಳಿದ್ದಾರೆ. “ಅಡುಗೆಯಲ್ಲಿ ತೊಡಗಿರುವ ಕೈದಿಗಳು ವಿವಿಧ ರೆಸ್ಟೊರೆಂಟ್‌ಗಳಲ್ಲಿ ಕಂಡುಬರುವಂತೆ ಅಪ್ರಾನ್‌ಗಳನ್ನು ಧರಿಸುತ್ತಾರೆ. ಅಡುಗೆ ಮಾಡುವವರು ತಮ್ಮ ಉಗುರುಗಳು ಮತ್ತು ಕೂದಲನ್ನು ಕತ್ತರಿಸುವುದನ್ನು ಖಚಿತಪಡಿಸಿಕೊಳ್ಳಲು ಪ್ರಯತ್ನಿಸಲಾಗುತ್ತದೆ” ಎಂದು ಜೈಲರ್ ಹೇಳಿದರು.