ಟುಪೆಲೋ(ಮಿಸಿಸಿಪ್ಪಿ): ವಿಮಾನವನ್ನು ಕಟ್ಟಡಕ್ಕೆ ಡಿಕ್ಕಿ ಹೊಡೆಸುವುದಾಗಿ ವಿಮಾನವನ್ನು ಅಪಹರಿಸಿದ ಪೈಲಟ್ ಬೆದರಿಕೆ ಹಾಕಿದ್ದ ಘಟನೆ ನಡೆದಿದೆ. ವಾಲ್ ಮಾರ್ಟ್ ಕಟ್ಟಡಕ್ಕೆ ವಿಮಾನವನ್ನು ಡಿಕ್ಕಿ ಹೊಡೆಸುವುದಾಗಿ ಪೈಲಟ್ ಬೆದರಿಕೆ ಹಾಕಿದ್ದಾನೆ.
ಅಮೆರಿಕದ ಮಿಸಿಸಿಪ್ಪಿಯಿಂದ ವಿಮಾನ ಟೇಕ್ ಆಫ್ ಆಗಿತ್ತು. ವಾಲ್ ಮಾರ್ಟ್ ಗೆ ವಿಮಾನ ಡಿಕ್ಕಿ ಹೊಡೆಸುವುದಾಗಿ ಅಪ್ಪಳಿಸುವುದಾಗಿ ಪೈಲಟ್ ಬೆದರಿಕೆ ಹಾಕಿದ್ದು, ಅಂಗಡಿಯಲ್ಲಿದ್ದವರನ್ನೆಲ್ಲ ತೆರವು ಮಾಡಲಾಗಿದೆ.
ಅಪರಿಚಿತ ಪೈಲಟ್ ಬೆದರಿಕೆ ಹಾಕಿದ ನಂತರ ಸ್ಥಳೀಯ ಅಧಿಕಾರಿಗಳು ಕ್ರಮಕೈಗೊಂಡಿದ್ದಾರೆ. 9 ಆಸನಗಳ ಸಣ್ಣ ವಿಮಾನವನ್ನು ಟ್ಯುಪೆಲೋ ವಿಮಾನ ನಿಲ್ದಾಣದಿಂದ ಅಪಹರಿಸಲಾಗಿದ್ದು, ಪಟ್ಟಣದ ಮೇಲೆ ಸುತ್ತು ಹಾಕಲಾಗಿದೆ. ಈ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಜನರಿಗೆ ತಿಳಿಸಲಾಗಿದೆ.
ಟ್ಯುಪೆಲೋ ಪೊಲೀಸ್ ಇಲಾಖೆಯು ಪೈಲಟ್ ನೊಂದಿಗೆ ಸಂಪರ್ಕದಲ್ಲಿದದ್ದು, ಉದ್ದೇಶಪೂರ್ವಕವಾಗಿ ವಿಮಾನ ಪತನಗೊಳಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಹೇಳಲಾಗಿದೆ.
ವಿಮಾನ ಆಗ್ನೇಯ ಏವಿಯೇಷನ್ ಎಲ್.ಎಲ್.ಸಿ. ಒಡೆತನಕ್ಕೆ ಸೇರಿದೆ. ಎರಡು ಎಂಜಿನ್, 9 ಸೀಟ್ ಗಳಿವೆ ಎಂದು ಗವರ್ನರ್ ಟೇಟ್ ರೀವ್ಸ್ ಹೇಳಿದರು. ರಾಜ್ಯ ಕಾನೂನು ಜಾರಿ ಮತ್ತು ತುರ್ತು ನಿರ್ವಾಹಕರು ಅಪಾಯಕಾರಿ ಪರಿಸ್ಥಿತಿಯನ್ನು ಟ್ರ್ಯಾಕ್ ಮಾಡುತ್ತಿದ್ದಾರೆ. ಎಲ್ಲಾ ನಾಗರಿಕರು ಜಾಗರೂಕರಾಗಿರಬೇಕು ಎಂದು ಪೊಲೀಸ್ ಸಿಬ್ಬಂದಿ ಮಾಹಿತಿ ನೀಡಿದ್ದಾರೆ.