ಕಳ್ಳತನ ಮಾಡುವ ಸನ್ನಿವೇಶ ಕ್ಯಾಮರಾದಲ್ಲಿ ಸೆರೆಯಾದ ಅನೇಕ ವೀಡಿಯೊಗಳು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ, ಶಾಪಿಂಗ್ ಮಾಲ್ನ ಒಳಗಿನಿಂದ ವೃದ್ಧ ದಂಪತಿ ಗಿಡ ಕದಿಯುತ್ತಿರುವುದನ್ನು ತೋರಿಸುವ ಇದೇ ರೀತಿಯ ವೀಡಿಯೊ ಜಾಲತಾಣದಲ್ಲಿ ಹರಿದಾಡುತ್ತಿದೆ.
ಆ ವೃದ್ಧ ದಂಪತಿ ಗಿಡ ಕದಿಯುತ್ತಿರುವಾಗ ಒಬ್ಬಾತ ರೆಕಾರ್ಡ್ ಮಾಡಿದ್ದು, ಇದರ ಸುಳಿವು ಅವರಿಬ್ಬರಿಗೂ ಇರಲಿಲ್ಲ. ಪ್ಯೂಬಿಟಿಯ ಇನ್ಸ್ಟಾಗ್ರಾಮ್ ಪುಟದಲ್ಲಿ ಹಂಚಿಕೊಳ್ಳಲಾದ ಘಟನೆಯ ವೀಡಿಯೊ ಕೆಲವೇ ಸಮಯದಲ್ಲಿ ವೆೈರಲ್ ಆಗಿದೆ.
ಎಸ್ಕಲೇಟರ್ನ ಪಕ್ಕದಲ್ಲಿ ಇಡಲಾಗಿದ್ದ ಪಾಟ್ನ ಪಕ್ಕದಲ್ಲೇ ವಯಸ್ಸಾದ ದಂಪತಿ ನಿಂತಿರುವಲ್ಲಿಂದ ಕ್ಲಿಪ್ ಪ್ರಾರಂಭವಾಗುತ್ತದೆ. ಇಬ್ಬರು ವಾತಾವರಣ ಶಾಂತವಾಗಿದೆಯೇ ಎಂದು ಸುತ್ತಲೂ ನೋಡುತ್ತಾರೆ. ಯಾರೂ ತಮ್ಮನ್ನು ಗಮನಿಸುತ್ತಿಲ್ಲ ಎಂದು ಖಚಿತಪಡಿಸಿಕೊಂಡರು.
ಮಹಿಳೆ ತನ್ನ ಪರ್ಸ್ನಿಂದ ಪೇಪರ್ ಬ್ಯಾಗ್ ತೆಗೆದು ಸರಸರನೆ ಗಿಡದ ಒಂದು ಸಣ್ಣ ಭಾಗವನ್ನು ಮುರಿದು ತುರುಕಿಕೊಂಡು ಹೆಚ್ಚಿನ ಗಿಡದ ಭಾಗವನ್ನು ಹಾಗೇ ಬಿಡುತ್ತಾರೆ. ತಮ್ಮ ಪ್ಲಾನ್ ಪೂರ್ಣಗೊಳಿಸಿದ ನಂತರ, ವೃದ್ಧ ದಂಪತಿಗಳು ಸದ್ದಿಲ್ಲದೆ ಹೊರನಡೆದರು.
ಘಟನೆಯನ್ನು ರೆಕಾರ್ಡ್ ಮಾಡುವಲ್ಲಿ ಯಶಸ್ವಿಯಾದ ಪ್ರೇಕ್ಷಕ ವೀಡಿಯೊಗೆ “ಅಜ್ಜಿ ಮಾಲ್ನಿಂದ ಗಿಡ ಕದಿಯುತ್ತಿದ್ದಾರೆ ಎಂದು ಶಿರ್ಷಿಕೆೆ ನೀಡಿ ಪೋಸ್ಟ್ ಮಾಡಿದ್ದಾರೆ.
ಈ ವಿಡಿಯೋ ಎಷ್ಟು ವೆೈರಲ್ ಆಗಿದೆ ಎಂದರೆ ಅದು ಬಾಲಿವುಡ್ ನಟಿ ಇಶಾ ಗುಪ್ತಾ ಅವರ ಗಮನವನ್ನು ಸೆಳೆದಿದೆ, ಅವರು ಕ್ಲಿಪ್ ಲೈಕ್ ಮಾಡಿದ್ದಾರೆ. 4 ಲಕ್ಷಕ್ಕೂ ಹೆಚ್ಚು ಲೈಕ್ ಗಳಿಸಿದೆ. ನೆಟ್ಟಿಗರು ಇದನ್ನು ಕಂಡು ಉಲ್ಲಾಸದಾಯಕ ಕಾಮೆಂಟ್ ಮಾಡಿದ್ದಾರೆ.
“ಇದು ಶತಮಾನದ ದರೋಡೆ” ಎಂದು ಒಬ್ಬರು ಬರೆದಿದ್ದಾರೆ.