ಉದ್ಯಮಿ ಮತ್ತು ಆರ್ಪಿಜಿ ಗ್ರೂಪ್ನ ಅಧ್ಯಕ್ಷ ಹರ್ಷ್ ಗೋಯೆಂಕಾ ಅವರು ಅತ್ಯಾಸಕ್ತಿಯ ಸಾಮಾಜಿಕ ಮಾಧ್ಯಮ ಬಳಕೆದಾರರಾಗಿದ್ದಾರೆ. ಹಾಗೂ ಉತ್ತಮ ಟ್ವೀಟ್ಗಳಿಗೆ ಹೆಸರುವಾಸಿಯಾಗಿದ್ದಾರೆ. ಇತ್ತೀಚೆಗೆ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಹೃದಯಸ್ಪರ್ಶಿ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ.
ಟಿಬೆಟಿಯನ್ ಸನ್ಯಾಸಿಯೊಬ್ಬರು ಕಳೆದ ವರ್ಷ ಹಬ್ಬದಂದು ಹಂಚಿಕೊಂಡ ಗಣೇಶ ವಂದನವನ್ನು ಹಾಡುವ ಹಳೆಯ ವಿಡಿಯೋವನ್ನು ಮರುಟ್ವೀಟ್ ಮಾಡಿದ್ದಾರೆ.
“ಟಿಬೆಟಿಯನ್ ಸನ್ಯಾಸಿ ಅನಿ ಚೋಯಿಂಗ್ ಡೋಲ್ಮಾ ಅವರಿಂದ ಅತ್ಯಂತ ಭಾವಪೂರ್ಣ ಗಣೇಶ ವಂದನಾ” ಎಂದು ಉದ್ಯಮಿ ತಮ್ಮ ಟ್ವೀಟ್ನಲ್ಲಿ ತಿಳಿಸಿದ್ದಾರೆ. ಆನಿ ಚೋಯಿಂಗ್ ಡೊಲ್ಮಾ ಎಂಬ ಸನ್ಯಾಸಿ ಹಾಡನ್ನು ಹಾಡುತ್ತಾ ಗಣೇಶನಲ್ಲಿ ಪ್ರಾರ್ಥಿಸಿದ್ದಾರೆ. ಈ ವಿಡಿಯೋ 73,000ಕ್ಕೂ ಹೆಚ್ಚು ವೀಕ್ಷಣೆಗಳು ಮತ್ತು 3,500ಕ್ಕೂ ಹೆಚ್ಚು ಲೈಕ್ಸ್ ಗಳೊಂದಿಗೆ ವೈರಲ್ ಆಗಿದೆ.
ಅನೇಕ ಟ್ವಿಟ್ಟರ್ ಬಳಕೆದಾರರು ಸನ್ಯಾಸಿಯ ಭಾವಪೂರ್ಣ ಧ್ವನಿಯನ್ನು ಶ್ಲಾಘಿಸಿದ್ದಾರೆ. ಟಿಬೆಟಿಯನ್ನರು ಎಷ್ಟು ಸುಂದರವಾಗಿ ಪಠಿಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರಬೇಕು. ಬಹಳ ಅದ್ಭುತವಾಗಿ ಪಠಿಸಿದ್ದಾರೆ ಅಂತಾ ಬಳಕೆದಾರರು ಪ್ರತಿಕ್ರಿಯಿಸಿದ್ದಾರೆ.