alex Certify BIG NEWS: ಆಂಗ್‌ ಸಾನ್‌ ಸೂಕಿಗೆ ಮತ್ತೆ ಸಂಕಷ್ಟ; ಚುನಾವಣಾ ಅಕ್ರಮ ಪ್ರಕರಣದಲ್ಲಿ 3 ವರ್ಷ ಜೈಲು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ಆಂಗ್‌ ಸಾನ್‌ ಸೂಕಿಗೆ ಮತ್ತೆ ಸಂಕಷ್ಟ; ಚುನಾವಣಾ ಅಕ್ರಮ ಪ್ರಕರಣದಲ್ಲಿ 3 ವರ್ಷ ಜೈಲು

ಚುನಾವಣಾ ವಂಚನೆಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಬಳಿಕ ಉಚ್ಚಾಟಿತ ನಾಯಕಿ ಆಂಗ್ ಸಾನ್ ಸೂಕಿಗೆ ಮ್ಯಾನ್ಮಾರ್‌ ನ್ಯಾಯಾಲಯ ಮೂರು ವರ್ಷಗಳ ಕಾರ್ಮಿಕ ಜೈಲು ಶಿಕ್ಷೆಯನ್ನು ವಿಧಿಸಿದೆ. ಮಿಲಿಟರಿ ಸರ್ಕಾರವು ವಿಚಾರಣೆ ನಡೆಸುತ್ತಿರುವ ಇತರ ಅಪರಾಧಗಳಿಗಾಗಿ ಅವರು ಈಗಾಗಲೇ ಸೇವೆ ಸಲ್ಲಿಸುತ್ತಿರುವ 17 ವರ್ಷಗಳ ಜೈಲು ಸಮಯವನ್ನು ಸಹ ಸೇರಿಸಿದೆ.

ಈ ತೀರ್ಪಿನಿಂದಾಗಿ ಸೂ ಕಿ ಅವರ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷದ ಮೇಲೆ ಮಹತ್ವದ ರಾಜಕೀಯ ಪರಿಣಾಮ ಉಂಟಾಗಲಿದೆ. ಹೊಸ ಚುನಾವಣೆಗೆ ಮೊದಲು ಅದನ್ನು ವಿಸರ್ಜಿಸುವ ಸರ್ಕಾರದ ಸ್ಪಷ್ಟ ಬೆದರಿಕೆಗಳಿಗೆ ಬೆಂಬಲವನ್ನು ನೀಡುವ ಮೂಲಕ ಮಿಲಿಟರಿ 2023ರಲ್ಲಿ ಚುನಾವಣೆ ನಡೆಸುವುದಾಗಿ ಈಗಾಗ್ಲೇ ಘೋಷಿಸಿದೆ.

ಸೂಕಿ ಅವರ ಪಕ್ಷ 2020ರ ಸಾರ್ವತ್ರಿಕ ಚುನಾವಣೆಯಲ್ಲಿ ಜಯಭೇರಿ ಬಾರಿಸಿತ್ತು. ಆದರೆ ವರ್ಷ ಕಳೆಯುವಷ್ಟರಲ್ಲಿ ಸೈನ್ಯವು ಅಧಿಕಾರವನ್ನು ಕಿತ್ತುಕೊಂಡು ಸೂಕಿ ಅವರನ್ನು ದೂರವಿಟ್ಟಿತ್ತು. ಸ್ವತಂತ್ರ ಚುನಾವಣಾ ವೀಕ್ಷಕರಿಗೆ ಸೂಕಿ ವಿರುದ್ಧ ಯಾವುದೇ ಪ್ರಮುಖ ಅಕ್ರಮಗಳು ಕಂಡುಬಂದಿಲ್ಲ. ಆದರೆ ಚುನಾವಣೆಯಲ್ಲಿ ವ್ಯಾಪಕ ವಂಚನೆ ನಡೆದಿರುವ ಕಾರಣದಿಂದ ಈ ಕ್ರಮ ಕೈಗೊಂಡಿರುವುದಾಗಿ ಸೇನೆ ವಾದಿಸಿದೆ. ಮಿಲಿಟರಿ, ಅಧಿಕಾರವನ್ನು ವಶಪಡಿಸಿಕೊಂಡಿದ್ದರಿಂದ ವ್ಯಾಪಕವಾದ ಶಾಂತಿಯುತ ಪ್ರತಿಭಟನೆಗಳು ನಡೆದವು.

ಆದರೆ ಅದನ್ನೂ ಬಲಪ್ರಯೋಗದ ಮೂಲಕ ತಡೆಗಟ್ಟಲಾಯ್ತು. ಬ್ರಿಟನ್‌ನ ಕೆಲವು ತಜ್ಞರು ಅದನ್ನು ಅಂತರ್ಯುದ್ಧವೆಂದೇ ಬಣ್ಣಿಸಿದ್ದಾರೆ. ಅಕ್ರಮವಾಗಿ ವಾಕಿಟಾಕಿಗಳ ಆಮದು, ಕೊರೊನಾ ವೈರಸ್‌ ನಿರ್ಬಂಧಗಳ ಉಲ್ಲಂಘನೆ, ದೇಶದ್ರೋಹ ಮತ್ತು ಐದು ಭ್ರಷ್ಟಾಚಾರದ ಆರೋಪದ ಮೇಲೆ ಸೂಕಿಗೆ ಈಗಾಗಲೇ 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ಆಕೆಯ ಪಕ್ಷದ ಮತ್ತು ಸರ್ಕಾರದ ಅನೇಕ ಉನ್ನತ ಸದಸ್ಯರು ಸಹ ಜೈಲು ಪಾಲಾಗಿದ್ದಾರೆ. ಕೆಲವರು ತಲೆಮರೆಸಿಕೊಂಡಿದ್ದು, ಇನ್ನೊಂದಷ್ಟು ಮಂದಿ ವಿದೇಶಕ್ಕೆ ಪಲಾಯನ ಮಾಡಿದ್ದಾರೆ.

 

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...