ನವದೆಹಲಿ: ದೆಹಲಿ-ಉದಯಪುರ ಇಂಡಿಗೋ ವಿಮಾನ ಇಂಜಿನ್ ಕಂಪನದಿಂದಾಗಿ ದೆಹಲಿಯ IGI ವಿಮಾನ ನಿಲ್ದಾಣಕ್ಕೆ ಮರಳಿದೆ.
ಉದಯಪುರ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇಂಡಿಗೋ ವಿಮಾನ “ಎಂಜಿನ್ ಕಂಪನ”ದಿಂದಾಗಿ ದೆಹಲಿಯ ಐಜಿಐ ವಿಮಾನ ನಿಲ್ದಾಣಕ್ಕೆ ಹಿಂದಿರುಗಿದೆ. ಇಂಡಿಗೋದ ಏರ್ ಬಸ್ A320 ನಿಯೋ ವಿಮಾನವನ್ನು ಸುರಕ್ಷಿತವಾಗಿ ಇಳಿಸಲಾಗಿದೆ. DGCA ಘಟನೆಯ ಬಗ್ಗೆ ತನಿಖೆ ನಡೆಸಲಿದೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ದೆಹಲಿಯಿಂದ ಉದಯಪುರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನದ ಎಂಜಿನ್ 2 ನಲ್ಲಿ ಕಂಪನ ಉಂಟಾದ ನಂತರ ಏರ್ ಟರ್ನ್ ಬ್ಯಾಕ್ ಮಾಡಿದೆ ಎಂದು ಅಧಿಕಾರಿ ಹೇಳಿದರು.
ಇಂಡಿಗೋ ವಿಮಾನ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುರಕ್ಷಿತವಾಗಿ ಇಳಿಯಿತು. ತಾಂತ್ರಿಕ ದೋಷದಿಂದಾಗಿ ದೆಹಲಿಗೆ ವಿಮಾನ ಹಿಂತಿರುಗಿದೆ. ಎಲ್ಲ ಪ್ರಯಾಣಿಕರಿಗೆ ಉದಯಪುರಕ್ಕೆ ಕಾರ್ಯಾಚರಣೆ ನಡೆಸಿದ ಮತ್ತೊಂದು ವಿಮಾನದಲ್ಲಿ ಕಳಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.