ಮಾರಣಾಂತಿಕ ಕೊರೊನಾ ವೈರಸ್ ವಿರುದ್ಧ ಜಗತ್ತಿನ ಜನರು ಹೋರಾಡುತ್ತಿದ್ದಾರೆ. ಅಧ್ಯಯನವೊಂದರಲ್ಲಿ ಅರಿಶಿನವು ಪ್ರಬಲವಾದ ಆಂಟಿವೈರಲ್ ಗುಣಗಳನ್ನು ಹೊಂದಿದೆ ಎಂಬುದು ಕಂಡು ಬಂದಿದೆ.
ಕೊರೊನಾ ವೈರಸ್ ಗುಣಪಡಿಸುವಲ್ಲಿ ಪ್ರಬಲವಾದ ಆಂಟಿವೈರಲ್ ಮಸಾಲೆ ಪರಿಣಾಮಕಾರಿ ಎಂಬುದು ಸಾಬೀತುಪಡಿಸಲು ಇನ್ನೂ ಹೆಚ್ಚಿನ ಸಂಶೋಧನೆಗಳು ನಡೆಯಬೇಕು. ಆದರೆ ಅರಿಶಿನವು ಆಂಟಿವೈರಲ್ ಗುಣಲಕ್ಷಣಗಳನ್ನು ಹೊಂದಿದೆ ಎಂಬ ಅಂಶ, ಭವಿಷ್ಯದಲ್ಲಿ ಸಹಕಾರಿಯಾಗಲಿದೆ.
ಭಾರತದಲ್ಲಿ ಅರಿಶಿನವು ಮಸಾಲೆ ಪದಾರ್ಥವಾಗಿ ಬಳಕೆಯಾಗ್ತಿದೆ. ಧಾರ್ಮಿಕ ಆಚರಣೆಗಳಿಂದ ಹಿಡಿದು ಔಷಧಿಗೆ ಇದನ್ನು ಬಳಸಲಾಗುತ್ತದೆ. ಅರಿಶಿನ ಭಾರತೀಯರ ಜೀವನದ ಒಂದು ಭಾಗವಾಗಿದೆ. ಯುಗದಿಂದಲೂ ಈ ಮಸಾಲೆ ರೋಗನಿರೋಧಕ ವರ್ಧಕವಾಗಿ ಬಳಕೆಯಾಗ್ತಿದೆ.
ಈ ಎಲ್ಲದರ ಮಧ್ಯೆ, ಇತ್ತೀಚಿನ ಸಂಶೋಧನೆಯ ಪ್ರಕಾರ ಅರಿಶಿನದಲ್ಲಿ ನೈಸರ್ಗಿಕ ಘಟಕ ಕರ್ಕ್ಯುಮಿನ್ ಇರುವುದು ಕೆಲವು ವೈರಸ್ಗಳನ್ನು ತೆಗೆದು ಹಾಕಲು ಸಹಾಯ ಮಾಡುತ್ತದೆ ಎಂಬುದು ಗೊತ್ತಾಗಿದೆ.