ಮನೆ ಎಂದ ಮೇಲೆ ಮೆಟ್ಟಿಲುಗಳಿರುತ್ವೆ. ಮನೆಯ ಸೌಂದರ್ಯ ಹೆಚ್ಚಿಸಲು ಅವಶ್ಯಕತೆ ಇಲ್ಲದ ಸ್ಥಳಗಳಲ್ಲಿ ಈಗ ಮೆಟ್ಟಿಲುಗಳನ್ನು ನಿರ್ಮಾಣ ಮಾಡ್ತಾರೆ. ಈ ಮೆಟ್ಟಿಲುಗಳಿಗೂ ಮನೆ ಸುಖ-ಶಾಂತಿಗೂ ಮಹತ್ವದ ಸಂಬಂಧವಿದೆ. ಮೆಟ್ಟಿಲು ನಿರ್ಮಾಣದ ವೇಳೆ ಕೆಲವೊಂದು ವಾಸ್ತುಶಾಸ್ತ್ರಗಳನ್ನು ಪಾಲಿಸಿದ್ರೆ ಮನೆಯಲ್ಲಿ ಆರ್ಥಿಕ ವೃದ್ಧಿಯಾಗುವ ಜೊತೆಗೆ ಸುಖ-ನೆಮ್ಮದಿ ನೆಲೆಸುತ್ತದೆ.
ವಾಸ್ತುಶಾಸ್ತ್ರದ ನಿಯಮದ ಪ್ರಕಾರ ಉತ್ತರದಿಂದ ದಕ್ಷಿಣಕ್ಕೆ ಅಥವಾ ಪೂರ್ವದಿಂದ ಪಶ್ಚಿಮಕ್ಕೆ ಮೆಟ್ಟಿಲುಗಳನ್ನು ನಿರ್ಮಾಣ ಮಾಡಬೇಕು.
ಪೂರ್ವ ಭಾಗದ ಗೋಡೆಯಿಂದ ಕನಿಷ್ಠ ಮೂರು ಇಂಚು ಬಿಟ್ಟು ಮೆಟ್ಟಿಲನ್ನು ಕಟ್ಟಬೇಕು.
ಈಶಾನ್ಯ ಅಥವಾ ಉತ್ತರ ಮೂಲೆಯಲ್ಲಿ ಎಂದೂ ಮೆಟ್ಟಿಲನ್ನು ನಿರ್ಮಾಣ ಮಾಡಬಾರದು. ಇದ್ರಿಂದ ಆರ್ಥಿಕ ನಷ್ಟವಾಗುತ್ತದೆ. ಆರೋಗ್ಯ ಸಮಸ್ಯೆ, ಕೆಲಸದಲ್ಲಿ ನಷ್ಟವುಂಟಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ ಮೆಟ್ಟಿಲ ಆರಂಭ ಹಾಗೂ ಕೊನೆಯಲ್ಲಿ ಬಾಕ್ಸ್ ನಿರ್ಮಾಣ ಮಾಡಿದ್ರೆ ಸಕಾರಾತ್ಮಕ ಶಕ್ತಿಯ ಪ್ರವೇಶವಾಗುತ್ತದೆ.
ಮೆಟ್ಟಿಲಿನ ಸಂಖ್ಯೆ ಎಂದೂ ಬೆಸ ಸಂಖ್ಯೆಯಾಗಿರಬೇಕು.
ಮಧ್ಯರಾತ್ರಿ ಎಂದೂ ಮೆಟ್ಟಿಲುಗಳನ್ನು ನಿರ್ಮಾಣ ಮಾಡಬಾರದು. ಇದು ಕುಟುಂಬ ಸದಸ್ಯರಲ್ಲಿ ಮಾನಸಿಕ ಅಶಾಂತಿಗೆ ಕಾರಣವಾಗುತ್ತದೆ.
ಬಾಗಿಲಿಗೆ ಹೊಂದಿಕೊಂಡು ಮೆಟ್ಟಿಲುಗಳನ್ನು ನಿರ್ಮಾಣ ಮಾಡಬಾರದು.