ಸಂಪೂರ್ಣ ಆಹಾರ. ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಹಾಲು ಆರೋಗ್ಯಕರ ಪಾನೀಯ.
ಆದ್ರೆ ಯಾವ ಸಮಯದಲ್ಲಿ ಹಾಲು ಕುಡಿದ್ರೆ ಹೆಚ್ಚು ಲಾಭದಾಯಕ ಅನ್ನೋ ಅನುಮಾನ ಎಲ್ಲರಲ್ಲೂ ಇದೆ. ಹಾಲನ್ನು ಯಾವ ಸಮಯದಲ್ಲಿ ಕುಡಿಯುವುದು ಸೂಕ್ತ ಅನ್ನೋದನ್ನು ನಾವ್ ಇವತ್ತು ನಿಮಗೆ ಹೇಳ್ತೀವಿ.
ಬೆಳಗ್ಗೆ ತಿಂಡಿಗೆ ಹೆಚ್ಚು ಪ್ರೋಟೀನ್ ಸೇವಿಸಲು ನೀವು ಇಷ್ಟಪಟ್ಟಲ್ಲಿ ಆಗ್ಲೇ ಹಾಲನ್ನು ಕುಡಿಯಿರಿ. ಕ್ಯಾಲ್ಷಿಯಂ, ಪ್ರೋಟೀನ್ ಮಾತ್ರವಲ್ಲದೆ ಹಾಲಿನಲ್ಲಿ ಪೊಟ್ಯಾಶಿಯಂ, ಮ್ಯಾಗ್ನಿಶಿಯಂ, ಫಾಸ್ಪರಸ್ ಹಾಗೂ ವಿಟಮಿನ್ ಗಳಿವೆ. ಬೆಳಗ್ಗೆ ನೀವು ವರ್ಕೌಟ್ ಮಾಡುವುದಾದಲ್ಲಿ ಆಗ ನಿಮ್ಮ ದೇಹಕ್ಕೆ ಕ್ಯಾಲ್ಷಿಯಂ ಮತ್ತು ಪ್ರೋಟೀನ್ ಅಗತ್ಯವಿರುತ್ತದೆ. ಹಾಗಾಗಿ ನೀವು ಬೆಳಗ್ಗೆಯೇ ಹಾಲನ್ನು ಸೇವಿಸುವುದು ಸೂಕ್ತ.
ದಿನಪೂರ್ತಿ ಹಸಿವನ್ನು ಇಂಗಿಸುವ ಇಚ್ಛೆ ನಿಮಗಿದ್ದಲ್ಲಿ ಬೆಳಗ್ಗೆ ಹಾಲು ಕುಡಿಯುವುದು ಹೆಚ್ಚು ಪ್ರಯೋಜನಕಾರಿ. ಹಾಲು ಕುಡಿದ ಮೇಲೆ ಹೊಟ್ಟೆ ತೊಳಸಿದಂತಾದ್ರೆ ಬೆಳಗ್ಗೆ ಸೇವಿಸದೇ ಇರುವುದು ಉತ್ತಮ. ನಿಮಗೆ ನಿದ್ದೆಯ ಸಮಸ್ಯೆ ಇದ್ರೆ, ರಾತ್ರಿ ಸರಿಯಾಗಿ ನಿದ್ದೆ ಬರುತ್ತಿಲ್ಲ ಅಂತಾದ್ರೆ ಮಲಗುವ ಮುನ್ನ ಬೆಚ್ಚಗಿನ ಹಾಲನ್ನು ಕುಡಿಯಿರಿ.
ದಿನಪೂರ್ತಿ ಕೆಲಸ ಮಾಡಿ ಸುಸ್ತಾಗಿರ್ತೀರಾ, ವಿಶ್ರಾಂತಿ ಬೇಕು ಎನಿಸಿದ್ರೆ ರಾತ್ರಿ ಹಾಲು ಸೇವನೆ ಸೂಕ್ತ. ಹಾಲಿನಲ್ಲಿರುವ ಅಮೈನೋ ಆಮ್ಲ ಮೆದುಳಿನ ಸಿರೋಟೋನಿನ್ ಬಿಡುಗಡೆ ಮಾಡುವುದರಿಂದ ನೀವು ರಿಲ್ಯಾಕ್ಸ್ ಆಗಿರಲು ಸಾಧ್ಯವಾಗುತ್ತದೆ.
ನೀವೇನಾದ್ರೂ ತೂಕ ಇಳಿಸಬೇಕು ಎಂದುಕೊಂಡಿದ್ರೆ ರಾತ್ರಿ ಹಾಲು ಕುಡಿಯಬೇಡಿ. ಕೆಲವರಿಗೆ ರಾತ್ರಿ ಹಾಲು ಸೇವಿಸಿದ್ರೆ ಅಜೀರ್ಣ ಉಂಟಾಗುತ್ತದೆ. ಹಾಲನ್ನು ಯಾವಾಗ ಕುಡಿದರೂ ಒಂದು ವಿಷಯ ನಿಮ್ಮ ಗಮನದಲ್ಲಿರಲಿ, ಅದು ಪೂರ್ತಿ ತಣ್ಣಗಿರಬಾರದು. ಉಗುರು ಬೆಚ್ಚಗಿನ ಹಾಲನ್ನೇ ಕುಡಿಯಿರಿ. ಆದ್ರೆ ಅತಿಯಾಗಿ ಹಾಲು ಸೇವನೆ ಕೂಡ ಒಳ್ಳೆಯದಲ್ಲ. ದಿನಕ್ಕೆ 150 ರಿಂದ 200 ಮಿಲಿ ಹಾಲು ಸೇವನೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ.