ಕತ್ರಿನಾ ಕೈಫ್ ಮತ್ತು ಸಿದ್ಧಾರ್ಥ್ ಮಲ್ಹೋತ್ರಾ ಅವರ ಕಾಲಾ ಚಶ್ಮಾ 2018 ರಲ್ಲಿ ಬಿಡುಗಡೆಯಾದ ಸಿನಿಮಾ. ಆದರೆ ಅದರ ಜನಪ್ರಿಯತೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ ನೀವು ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಸಕ್ರಿಯರಾಗಿದ್ದರೆ ಈ ಹಾಡಿನ ವಿಡಿಯೋಗಳನ್ನು ಬಹುಶಃ ನೀವು ನೋಡಿರಬಹುದು. ಇದೀಗ ವಾಲಿಬಾಲ್ ಆಟಗಾರರ ತಂಡವೊಂದು ಕೋರ್ಟ್‌ನಲ್ಲಿ ಟ್ರೆಂಡಿಂಗ್ ಟ್ರ್ಯಾಕ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ.
ಹೌದು, ಇದೀಗ ವೈರಲ್ ಆಗಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹೋಲ್‌ಸಮ್ ಮೀಮ್ ವರ್ಲ್ಡ್ ಎಂಬ ಪುಟ ಹಂಚಿಕೊಂಡಿದೆ. ವಿಡಿಯೋದಲ್ಲಿ, ವಾಲಿಬಾಲ್ ತಂಡದ ಯುವತಿಯೊಬ್ಬಳು ತನ್ನ ಸಹ ಆಟಗಾರರಿಗೆ ಚೆಂಡನ್ನು ರವಾನಿಸಿದ್ದಾಳೆ. ನಂತರ ಸಹ ಆಟಗಾರ್ತಿ ಚೆಂಡನ್ನು ಮತ್ತೊಬ್ಬರಿಗೆ ರವಾನಿಸಿದ್ರು. ಈ ವೇಳೆ ಆಕೆ ಚೆಂಡನ್ನು ತಪ್ಪಾಗಿ ಹೊಡೆದು ಕೆಳಕ್ಕೆ ಬಿದ್ದಿದ್ದಾಳೆ. ಕೂಡಲೇ ಅಲ್ಲಿ ಕುಳಿತಿದ್ದ ಇತರೆ ಯುವತಿಯರ ಮಧ್ಯದಲ್ಲಿ ತನ್ನ ಸೊಂಟ ಬಳುಕಿಸಿದ್ದಾಳೆ.
ಆನ್‌ಲೈನ್‌ನಲ್ಲಿ ಹಂಚಿಕೊಂಡ ನಂತರ ವಿಡಿಯೋ 4.9 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ. ನೆಟ್ಟಿಗರು ಯುವತಿಯರ ಪೂರ್ವಸಿದ್ಧತೆಯಿಲ್ಲದ ಅಭಿನಯದಿಂದ ಪ್ರಭಾವಿತರಾಗಿದ್ದಾರೆ ಮತ್ತು ಕಾಮೆಂಟ್‌ಗಳ ವಿಭಾಗದಲ್ಲಿ ತಮ್ಮ ಪ್ರೀತಿಯನ್ನು ಸುರಿಸಿದ್ದಾರೆ.