ಈಗ ಎಲ್ಲವೂ ಆನ್ಲೈನ್ನಲ್ಲೇ ಸಿಗುತ್ತೆ. ತಿನಿಸುಗಳು, ಮನೆಬಳಕೆಯ ಸಾಮಗ್ರಿಳಿಂದ ಹಿಡಿದು ಕಾಂಡೋಮ್ವರೆಗೆ ಎಲ್ಲವನ್ನೂ ನೀವು ಕುಳಿತಲ್ಲಿಯೇ ಆರ್ಡರ್ ಮಾಡಬಹುದು. ಕಾಂಡೋಮ್ಗಳನ್ನು ಆನ್ಲೈನ್ ಮೂಲಕ ಖರೀದಿ ಮಾಡುವುದರಲ್ಲಿ ವಾಣಿಜ್ಯ ನಗರಿ ಮುಂಬೈ ನಂಬರ್ ವನ್ ಸ್ಥಾನದಲ್ಲಿದೆ.
ಸ್ವಿಗ್ಗಿ ಇನ್ಸ್ಟಾಮಾರ್ಟ್ ಮೂಲಕ ಆನ್ಲೈನ್ನಲ್ಲಿ ಮುಂಬೈ ನಿವಾಸಿಗಳು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಡೋಮ್ಗಳನ್ನು ಆರ್ಡರ್ ಮಾಡಿದ್ದಾರೆ. Swiggy ಈ ಬಗ್ಗೆ ಮಾಹಿತಿ ನೀಡಿದೆ.
ಕಳೆದ ವರ್ಷಕ್ಕೆ ಹೋಲಿಸಿದ್ರೆ ಮುಂಬೈ ಗ್ರಾಹಕರು ಕಳೆದ 12 ತಿಂಗಳುಗಳಲ್ಲಿ Swiggy Instamart ನಲ್ಲಿ 570 ಪಟ್ಟು ಹೆಚ್ಚು ಕಾಂಡೋಮ್ಗಳನ್ನು ಆರ್ಡರ್ ಮಾಡಿದ್ದಾರೆ. ಆನ್ಲೈನ್ ಮೂಲಕ ಅತಿ ಹೆಚ್ಚು ಕಾಂಡೋಮ್ ಖರೀದಿ ಮಾಡ್ತಿರೋ ಮೆಟ್ರೋ ಸಿಟಿಗಳಲ್ಲಿ ಮುಂಬೈ ನಂಬರ್ ವನ್ ಸ್ಥಾನದಲ್ಲಿದೆ.
ಕಳೆದ ಎರಡು ವರ್ಷಗಳಲ್ಲಿ ಬೇಡಿಕೆ ಹೆಚ್ಚಿಸಿಕೊಂಡಿರುವ ಮತ್ತೊಂದು ಉತ್ಪನ್ನವೆಂದರೆ ಕೋಳಿ ಮೊಟ್ಟೆ. ಕಳೆದೆರಡು ವರ್ಷಗಳಲ್ಲಿ 50 ಮಿಲಿಯನ್ ಮೊಟ್ಟೆಗಳಿಗೆ ಆರ್ಡರ್ ಬಂದಿದೆ. ಬೆಂಗಳೂರು, ದೆಹಲಿ ಮತ್ತು ಮುಂಬೈನಲ್ಲಿ ಕಳೆದ ವರ್ಷದಲ್ಲಿ ಸರಾಸರಿ 6 ಮಿಲಿಯನ್ ಮೊಟ್ಟೆಗಳನ್ನು ಆರ್ಡರ್ ಮಾಡಲಾಗಿದೆ.
ಬೆಳಗಿನ ಉಪಾಹಾರದ ಸಮಯದಲ್ಲಿ ಬೆಂಗಳೂರು ಮತ್ತು ಹೈದ್ರಾಬಾದ್ ಗ್ರಾಹಕರು ಗರಿಷ್ಠ ಸಂಖ್ಯೆಯಲ್ಲಿ ಮೊಟ್ಟೆಗಳನ್ನು ಆರ್ಡರ್ ಮಾಡಿದ್ದಾರೆ. ಬೆಳಗಿನ ಉಪಹಾರದ ಆರ್ಡರ್ಗಳಲ್ಲಿ ಮುಂಚೂಣಿಯಲ್ಲಿರೋ ಮತ್ತೊಂದು ಉತ್ಪನ್ನವೆಂದರೆ ಹಾಲು. ಬೆಂಗಳೂರು ಮತ್ತು ಮುಂಬೈನಿಂದ ಹಾಲಿಗಾಗಿ ಅತಿ ಹೆಚ್ಚು ಆರ್ಡರ್ಗಳು ಬಂದಿದೆ. ಬೆಂಗಳೂರಿಗರು ಹೆಚ್ಚಿನ ಪ್ರಮಾಣದಲ್ಲಿ ಸೋಯಾ ಮತ್ತು ಓಟ್ ಮಿಲ್ಕ್, ಪೋಹಾ ಮತ್ತು ಉಪ್ಮಾದ ರೆಡಿ-ಟು-ಈಟ್ ಆವೃತ್ತಿಗಳನ್ನು ಆರ್ಡರ್ ಮಾಡಿದ್ದಾರೆ.
Swiggy Instamart ನಲ್ಲಿರುವ ಜನಪ್ರಿಯ ಉತ್ಪನ್ನಗಳೆಂದರೆ ಕಾಂಡೋಮ್, ಮೊಟ್ಟೆ, ಸ್ಯಾನಿಟರಿ ನ್ಯಾಪ್ಕಿನ್ಸ್ ಮತ್ತು ಟ್ಯಾಂಪೂನ್ಸ್. ಕಳೆದ ವರ್ಷ ಬಾತ್ರೂಮ್ ಕ್ಲೀನರ್ಗಳು, ಸ್ಕ್ರಬ್ ಪ್ಯಾಡ್ಗಳು, ಡ್ರೈನ್ ಕ್ಲೀನರ್ಗಳಿಗಾಗಿ 2 ಲಕ್ಷಕ್ಕೂ ಹೆಚ್ಚು ಆರ್ಡರ್ಗಳು ಬಂದಿವೆ. ಬೆಂಗಳೂರು, ಮುಂಬೈ, ಹೈದ್ರಾಬಾದ್, ದೆಹಲಿ ಮತ್ತು ಚೆನ್ನೈನಲ್ಲಿರುವ ಗ್ರಾಹಕರು ಆ್ಯಪ್ನ ಅತಿದೊಡ್ಡ ಬಳಕೆದಾರರಾಗಿದ್ದಾರೆ.