ಈಗಾಗ್ಲೇ ಆದಾಯ ತೆರಿಗೆ ಪಾವತಿ ಮಾಡಿರುವವರು ಮರುಪಾವತಿಯನ್ನು ಸಹ ಪಡೆದುಕೊಳ್ತಿದ್ದಾರೆ. ಹೆಚ್ಚಿನ ತೆರಿಗೆಗಳನ್ನು ಪಾವತಿಸಿದ ಕ್ರೆಡಿಟ್ ಅನ್ನು ಅನೇಕ ಜನರು ಸರ್ಕಾರದಿಂದ ಬಂದ ಅನಿರೀಕ್ಷಿತ ಲಾಭವೆಂದು ಭಾವಿಸುತ್ತಾರೆ. ಹೆಚ್ಚಿನ ಜನರು ತಮ್ಮ ಆದಾಯ ತೆರಿಗೆ ಮರುಪಾವತಿ ಕ್ರೆಡಿಟ್ ಅನ್ನು ಅನಗತ್ಯ ದುಂದುಗಾರಿಕೆಗೆ ಖರ್ಚು ಮಾಡುತ್ತಾರೆ.
ನಿಮ್ಮ ತೆರಿಗೆ ರಿಟರ್ನ್‌ನಲ್ಲಿ ನೀವು ಮರುಪಾವತಿಯನ್ನು ನಿರೀಕ್ಷಿಸುತ್ತಿದ್ದರೆ ಅಥವಾ ಪ್ರಸ್ತುತ ಆ ಹಣವನ್ನು ನಿಮ್ಮ ಬ್ಯಾಂಕ್ ಖಾತೆಯಲ್ಲಿ ಹೊಂದಿದ್ದರೆ, ಅದರ ಮೌಲ್ಯವನ್ನು ಗರಿಷ್ಠಗೊಳಿಸಲು ಕೆಲವು ಬುದ್ಧಿವಂತ ಮಾರ್ಗಗಳು ಇಲ್ಲಿವೆ:
ಸಾಲ ಪಾವತಿಸಿ: ಕ್ರೆಡಿಟ್ ಕಾರ್ಡ್ ಸಾಲ, ಪೇ ಡೇ ಲೋನ್‌ಗಳು ಮತ್ತು ಇತರ ರೀತಿಯ ಸಾಲಗಳು ಮಾಸಿಕ ಆಧಾರದ ಮೇಲೆ ಬಡ್ಡಿ ಹೇರಿದಾಗ ಗ್ರಾಹಕರು ಕಂಗಾಲಾಗುತ್ತಾರೆ. ನಿಮ್ಮ ಒಟ್ಟಾರೆ ಬಡ್ಡಿ ದರವನ್ನು ಕಡಿಮೆ ಮಾಡಲು ಮತ್ತು ನೀವು ಸಾಲದಲ್ಲಿರುವ ಅವಧಿಯನ್ನು ಕಡಿಮೆ ಮಾಡಲು ಆರಂಭದಲ್ಲೇ ಪೂರ್ಣ ಪೂರ್ವಪಾವತಿಯನ್ನು ಮಾಡಿ. ಆದಾಗ್ಯೂ ಸ್ವಲ್ಪ ಹೆಚ್ಚುವರಿ ಹಣವನ್ನು ಹೊಂದಿದ್ದರೆ, ನೀವು ಪೂರ್ವಪಾವತಿ ಮಾಡಬಹುದು ಮತ್ತು ಲೋನ್‌ನಿಂದ ಮುಕ್ತರಾಗಬಹುದು.
ಲೈಫ್ & ಹೆಲ್ತ್ ಇನ್ಷೂರೆನ್ಸ್ ಖರೀದಿಸಿ: ಕುಟುಂಬದಲ್ಲಿ ತೀವ್ರ ಆರ್ಥಿಕ ಒತ್ತಡವನ್ನು ಉಂಟುಮಾಡುವ ಅನಿರೀಕ್ಷಿತ ಸಂದರ್ಭಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಇದಕ್ಕಾಗಿ ಸರಿಯಾಗಿ ಯೋಜಿಸಲು ಆದ್ಯತೆ ನೀಡಬೇಕು. ಲೈಫ್ & ಹೆಲ್ತ್ ಇನ್ಷೂರೆನ್ಸ್ ಖರೀದಿಸುವುದು ಉತ್ತಮ. ಇದು ಸಾಕಷ್ಟು ತೆರಿಗೆ ಪ್ರಯೋಜನಗಳನ್ನು ಸಹ ನೀಡುತ್ತದೆ.
ತುರ್ತು ನಿಧಿ: ಆರ್ಥಿಕ ಸ್ಥಿರತೆ ಕಾಯ್ದುಕೊಳ್ಳಲು ನಿರ್ಣಾಯಕ ಸಂಪನ್ಮೂಲವೆಂದರೆ ತುರ್ತು ನಿಧಿ. ಈ ತುರ್ತು ನಿಧಿಯು ನಿಮಗೆ ಆದಾಯದ ನಷ್ಟ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳು ಅಥವಾ ತುರ್ತು ನಗದು ಅವಶ್ಯಕತೆಗಳನ್ನು ಪೂರೈಸಲು ನೆರವಾಗುತ್ತದೆ. ನಿಮ್ಮ ತುರ್ತು ನಿಧಿಯು ಮೂರರಿಂದ ಆರು ತಿಂಗಳ ಮೌಲ್ಯದ ಕನಿಷ್ಠ ಜೀವನ ವೆಚ್ಚವನ್ನು ಸರಿದೂಗಿಸುವಂತಿರಬೇಕು.
ನಿವೃತ್ತಿ ಯೋಜನೆಗಳಲ್ಲಿ ಹೂಡಿಕೆ ಮಾಡಿ: NPS ನಂತಹ ನಿವೃತ್ತಿ ಯೋಜನೆಗಳಲ್ಲಿನ ಹೂಡಿಕೆ ಮಾಡಿದ್ರೆ 50,000 ರೂಪಾಯಿವರೆಗೆ ತೆರಿಗೆ ಕಡಿತದ ಲಾಭ ನಿಮಗೆ ಸಿಗುತ್ತದೆ.
ಅಧ್ಯಯನ ಅಥವಾ ಇತರ ವೃತ್ತಿಪರ ಅಭಿವೃದ್ಧಿಗೆ ಹಣಕಾಸು: ನಿಮ್ಮ ತೆರಿಗೆ ಮರುಪಾವತಿಯು ಶೈಕ್ಷಣಿಕ ಅವಕಾಶಗಳು, ವೃತ್ತಿಪರ ಬೆಳವಣಿಗೆ ಅಥವಾ ಇತರ ರೀತಿಯ ತರಬೇತಿಯ ಮೂಲಕ ನಿಮ್ಮ ಉದ್ಯೋಗದಲ್ಲಿ ಮುನ್ನಡೆಯಲು ಅಗತ್ಯವಿರುವ ಅವಕಾಶಗಳನ್ನು ನಿಮಗೆ ಒದಗಿಸಬಹುದು. ತೆರಿಗೆ ಪಾವತಿಯ ಸಮಯದಲ್ಲಿ ಕೆಲವು ಶೈಕ್ಷಣಿಕ ವೆಚ್ಚಗಳಿಂದಾಗಿ ತೆರಿಗೆ ವಿನಾಯಿತಿ ಸಿಗಬಹುದು. ಇದರಿಂದ ಒಟ್ಟಾರೆ ತೆರಿಗೆ ಹೊರೆಯನ್ನು ಕಡಿಮೆ ಮಾಡಬಹುದು.