alex Certify ಈ ಯುವತಿಗೆ ತನ್ನ ಗೆಳೆಯ ರಿಕ್ಷಾ ಚಾಲಕರು, ವೇಟರ್ ಗಳೊಂದಿಗೆ ಮಾತನಾಡುವುದು ಇಷ್ಟವಿಲ್ವಂತೆ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಈ ಯುವತಿಗೆ ತನ್ನ ಗೆಳೆಯ ರಿಕ್ಷಾ ಚಾಲಕರು, ವೇಟರ್ ಗಳೊಂದಿಗೆ ಮಾತನಾಡುವುದು ಇಷ್ಟವಿಲ್ವಂತೆ…..!

ವಿಲಕ್ಷಣವಾದ ಪೋಸ್ಟ್ ಒಂದು ಇಂಟರ್ನೆಟ್‌ ಗಮನವನ್ನು ಸೆಳೆದಿದ್ದು, ಅದು ಸಾಮಾಜಿಕ ಮಾಧ್ಯಮದಲ್ಲಿ ಕ್ರೇಜಿ ವೈರಲ್ ಆಗುತ್ತಿದೆ. ಟ್ವಿಟ್ಟರ್ ಬಳಕೆದಾರರು ಕ್ವಾರಾ ಪೋಸ್ಟ್‌ನ ಸ್ಕ್ರೀನ್‌ಶಾಟ್ ಅನ್ನು ಹಂಚಿಕೊಂಡಿದ್ದಾರೆ. ಯುವತಿಯೊಬ್ಬಳು ತನ್ನ ಗೆಳೆಯನ ಬಗ್ಗೆ ದೂರು ನೀಡಿದ್ದಾಳೆ. ಆಕೆಯ ಗೆಳೆಯನ ನಡವಳಿಕೆಯ ಯಾವ ಅಂಶವು ಆಕೆಗೆ ಮನನೊಂದಿದೆ ಎಂಬುದನ್ನು ಕೇಳಿದ್ರೆ ನೀವು ಅಚ್ಚರಿಪಡುತ್ತೀರಾ.

ಹೌದು, ರಿಕ್ಷಾ ಚಾಲಕರು, ಕೂಲಿ ಕೆಲಸ ಮಾಡುವವರು ಮುಂತಾದವರೊಂದಿಗೆ ಗೆಳೆಯ ಮಾತನಾಡುವುದು ಆಕೆಗೆ ಚೂರೂ ಸರಿಹೊಂದುವುದಿಲ್ಲವಂತೆ. ತನ್ನ ಗೆಳೆಯ ಕೆಳ ಮಧ್ಯಮ ವರ್ಗದ ಕುಟುಂಬದಿಂದ ಬಂದವನು. ದೊಡ್ಡ ಸಂಸ್ಥೆಯಲ್ಲಿ ದುಡಿಯುತ್ತಿದ್ದು, ಉತ್ತಮವಾದ ಆದಾಯವೂ ಬರುತ್ತಿದೆ. ಆದರೆ ಅವನು ರಿಕ್ಷಾ ಚಾಲಕರು ಮತ್ತು ವೇಟರ್‌ಗಳೊಂದಿಗೆ ಮಾತನಾಡುತ್ತಾನೆ. ಅಲ್ಲದೆ ರಸ್ತೆಬದಿಯಲ್ಲಿ ಚಹಾ ಕುಡಿಯುತ್ತಾನೆ. ತನ್ನ ಬಾಯ್‌ಫ್ರೆಂಡ್ ನನ್ನು ಹೆಚ್ಚು ಮಾಡರ್ನ್ ಆಗಿ ಮಾಡುವುದು ಹೇಗೆ? ಎಂದು ಯುವತಿ ಪ್ರಶ್ನಿಸಿದ್ದಾಳೆ.

ಯುವತಿಯ ಈ ಪೋಸ್ಟ್ ಆನ್‌ಲೈನ್‌ನಲ್ಲಿ ಪ್ರತಿಕ್ರಿಯೆಗಳ ಅಲೆಯನ್ನೇ ಉಂಟು ಮಾಡಿದೆ. ಹಲವಾರು ಟ್ವಿಟ್ಟರ್ ಬಳಕೆದಾರರು ಆಕೆಯ ಈ ಹೇಳಿಕೆಗಳ ಬಗ್ಗೆ ಜಿಗುಪ್ಸೆಗೊಂಡಿದ್ದಾರೆ. ಯುವಕ ಆಕೆಯೊಂದಿಗೆ ಸಂಬಂಧ ಇಟ್ಟುಕೊಳ್ಳಬಾರದು ಅಂತಾ ಕೆಲವರು ಸಲಹೆ ನೀಡಿದರು.

— Typo King (@Hopayega09) August 29, 2022

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...