ಭದ್ರಾ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ, ಭದ್ರಾ ಜಲಾಶಯದ ನೀರಿನ ಮಟ್ಟದಲ್ಲಿ ಏರಿಕೆಯಾಗುತ್ತಿದೆ. ಇನ್ನು ಅರ್ಧ ಅಡಿ ನೀರು ಬಂದರೆ ಜಲಾಶಯ ಭರ್ತಿಯಾಗುತ್ತದೆ.
ಸೆಪ್ಟೆಂಬರ್ 1ರಂದು ಜಲಾಶಯದ ನೀರಿನ ಮಟ್ಟ 185.6 ಅಡಿಗಳಾಗಿದ್ದು, ಗರಿಷ್ಠ ಮಟ್ಟ186 ಅಡಿಗಳಾಗಿದೆ. ಜಲಾಶಯಕ್ಕೆ 10883 ಕ್ಯುಸೆಕ್ ನೀರು ಹರಿದು ಬರುತ್ತಿದ್ದು, ಹೊರ ಹರಿವು 5432 ಕ್ಯುಸೆಕ್ ಆಗಿದೆ.
ಇನ್ನು ಲಿಂಗನಮಕ್ಕಿ ಜಲಾಶಯದ ಇಂದಿನ ನೀರಿನ ಮಟ್ಟ 1814.40 ಅಡಿಗಳಾಗಿದ್ದು ಗರಿಷ್ಠ ಮಟ್ಟ 1819 ಅಡಿಗಳಾಗಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 1812.70 ಅಡಿಗಳಾಗಿತ್ತು.