ಜಾತಕದಲ್ಲಿ ಶುಕ್ರ ಪ್ರಭಾವಶಾಲಿಯಾಗಿದ್ದರೆ ಭೌತಿಕ ಸಂತೋಷ ಪ್ರಾಪ್ತಿಯಾಗುತ್ತದೆ. ಅದೇ ಶುಕ್ರ ದುರ್ಬಲ ಅಥವಾ ಹಾನಿಕಾರಕನಾಗಿದ್ದರೆ ಭೌತಿಕ ಸುಖ ಕನಸಿನ ಮಾತು. ಆನಂದ, ಸ್ತ್ರೀ ಸುಖ, ಸಂಪತ್ತು, ವಿವಾಹ, ವಾಹನ ಎಲ್ಲ ಸುಖ-ಸಂತೋಷಕ್ಕೂ ಶುಕ್ರ ದೆಸೆ ಬೇಕು.
ಶುಕ್ರವಾರವನ್ನು ಗುರು ಶುಕ್ರಾಚಾರ್ಯ ಮತ್ತು ಧನ ಲಕ್ಷ್ಮಿಯ ಆಶೀರ್ವಾದ ಪಡೆಯಲು ಶ್ರೇಷ್ಠವೆಂದು ಪರಿಗಣಿಸಲಾಗಿದೆ. ಶುಕ್ರವಾರ ಕೆಲವೊಂದು ವಸ್ತುಗಳನ್ನು ಮನೆಗೆ ತರುವುದರಿಂದ ಲಾಭವಾಗುತ್ತದೆ.
ಸಿಲ್ವರ್ ಮತ್ತು ಕಂಚಿನಲ್ಲಿ ಮಾಡಿದ ವಸ್ತುಗಳನ್ನು ತಂದು ಈಶಾನ್ಯ ಭಾಗದಲ್ಲಿಡಿ.
ಎಲೆಕ್ಟ್ರಿಕಲ್ ವಸ್ತುಗಳನ್ನು ಪಶ್ಚಿಮ ದಿಕ್ಕಿನಲ್ಲಿಡಿ.
ಅಷ್ಟ ಧಾತುವಿನಿಂದ ಮಾಡಿದ ಸ್ವಸ್ತಿಕವನ್ನು ಖರೀದಿ ಮಾಡಿ ಮನೆಯ ಮುಖ್ಯದ್ವಾರದಲ್ಲಿಡಿ. ಪ್ರತಿದಿನ ಅದಕ್ಕೆ ಪೂಜೆ ಮಾಡಿ.
ಶ್ರೀ ಗಣೇಶ ಹಾಗೂ ಲಕ್ಷ್ಮಿ ಚಿತ್ರವಿರುವ ಚಿನ್ನದ ನಾಣ್ಯವನ್ನು ಖರೀದಿ ಮಾಡಿ. ಇದು ಸಾಧ್ಯವಾಗದಿದ್ದಲ್ಲಿ ಬೆಳ್ಳಿ ನಾಣ್ಯವನ್ನು ಖರೀದಿ ಮಾಡಬಹುದು. ಇದನ್ನು ವಿಧಿ-ವಿಧಾನದ ಮೂಲಕ ಪೂಜೆ ಮಾಡಿ ಕಪಾಟಿನಲ್ಲಿಡಿ.
ಗಣೇಶ ಅಥವಾ ಲಕ್ಷ್ಮಿ ದೇವಿಯ ಮೂರ್ತಿಯನ್ನು ಖರೀದಿ ಮಾಡಿ ದೇವರ ಮನೆಯಲ್ಲಿ ಸ್ಥಾಪನೆ ಮಾಡಿ.
ಶುಕ್ರವಾರ ಸಂಜೆ ತಾಯಿ ಲಕ್ಷ್ಮಿಯ ಫೋಟೋ ಅಥವಾ ಮೂರ್ತಿಗೆ ಪೂಜೆ ಮಾಡಿ. ಪೂಜೆ ಮಾಡುವ ವೇಳೆ 7 ಚಿಪ್ಪುಗಳನ್ನು ತಾಯಿಯ ಚರಣದ ಮೇಲಿಡಿ. ಪೂಜೆ ನಂತ್ರವೂ ಅದು ಅಲ್ಲೇ ಇರಲಿ. ರಾತ್ರಿ 12 ಗಂಟೆಗೆ ಅದನ್ನು ತೆಗೆದು ಮಣ್ಣಿನಲ್ಲಿ ಮುಚ್ಚಿ. ಹೀಗೆ ಮಾಡಿದ್ರೆ ಆರ್ಥಿಕ ಸಮಸ್ಯೆ ದೂರವಾಗುತ್ತದೆ.