ಪ್ರಧಾನಿ ನರೇಂದ್ರ ಮೋದಿಯವರ ಆಹಾರ ವೆಚ್ಚದ ಕುರಿತಂತೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಹತ್ವದ ಮಾಹಿತಿ ಬಹಿರಂಗವಾಗಿದೆ. ಪ್ರಧಾನಿಯವರ ಆಹಾರಕ್ಕೆ ಸರ್ಕಾರದ ಹಣವನ್ನು ಬಳಸುತ್ತಿಲ್ಲ ಎಂಬ ಮಾಹಿತಿಯನ್ನು ಅರ್ಜಿದಾರರಿಗೆ ನೀಡಲಾಗಿದ್ದು, ಖುದ್ದು ನರೇಂದ್ರ ಮೋದಿಯವರೇ ಈ ವೆಚ್ಚವನ್ನು ಭರಿಸುತ್ತಾರೆ ಎಂದು ತಿಳಿಸಲಾಗಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪ್ರಧಾನಮಂತ್ರಿ ಕಾರ್ಯಾಲಯದ ಕಾರ್ಯದರ್ಶಿ ವಿನೋದ್ ಬಿಹಾರಿ ಸಿಂಗ್ ಅವರು ಈ ಉತ್ತರ ನೀಡಿದ್ದು, ಈವರೆಗೆ ಒಂದೇ ಒಂದು ನಯಾ ಪೈಸೆಯನ್ನು ಸಹ ಪ್ರಧಾನಿ ನರೇಂದ್ರ ಮೋದಿಯವರ ಅಹಾರಕ್ಕಾಗಿ ಸರ್ಕಾರದಿಂದ ವೆಚ್ಚ ಮಾಡಲಾಗಿಲ್ಲ ಎಂದು ತಿಳಿಸಿದ್ದಾರೆ.
ಇನ್ನು ಪ್ರಧಾನಿ ನಿವಾಸದ ಉಸ್ತುವಾರಿಯನ್ನು ಕೇಂದ್ರ ಲೋಕಪಯೋಗಿ ಇಲಾಖೆ ನೋಡಿಕೊಳ್ಳುತ್ತಿದ್ದು, ಅಲ್ಲಿನ ವಾಹನ, ಎಸ್ ಪಿ ಜಿ ಹಾಗೂ ಇತರೆ ಸಿಬ್ಬಂದಿಗಳ ವೇತನವನ್ನು ನೀಡುತ್ತಿದೆ ಎಂದು ಮತ್ತೊಂದು ಮಾಹಿತಿ ನೀಡಲಾಗಿದೆ. ಇವರುಗಳ ವೇತನದ ಕುರಿತು ವಿವರ ನೀಡಿಲ್ಲವಾದರೂ ನಿಯಮಗಳಂತೆ ಇಂಕ್ರಿಮೆಂಟ್ ನೀಡಲಾಗಿದೆ ಎಂದು ತಿಳಿಸಲಾಗಿದೆ.
2014ರಲ್ಲಿ ನರೇಂದ್ರ ಮೋದಿಯವರು ಮೊದಲ ಬಾರಿಗೆ ಪಾರ್ಲಿಮೆಂಟ್ ಪ್ರವೇಶಿಸಿದ್ದು 2015ರ ಮಾರ್ಚ್ 2 ರಂದು ಬಜೆಟ್ ಅಧಿವೇಶನ ಮುಗಿದ ಬಳಿಕ ಮೊದಲ ಅಂತಸ್ತಿನಲ್ಲಿದ್ದ ಪಾರ್ಲಿಮೆಂಟ್ ಕ್ಯಾಂಟೀನ್ ಗೆ ಭೇಟಿ ನೀಡಿ ಅಚ್ಚರಿ ಮೂಡಿಸಿದ್ದರು. ಅಲ್ಲದೆ 2021 ರಿಂದ ಪಾರ್ಲಿಮೆಂಟ್ ಕ್ಯಾಂಟೀನ್ ಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಹಿಂಪಡೆಯಲಾಗಿದೆ. ಸಬ್ಸಿಡಿ ಗಂದೇ ಪ್ರತಿ ವರ್ಷ 17 ಕೋಟಿ ರೂಪಾಯಿಗಳನ್ನು ವೆಚ್ಚ ಮಾಡಲಾಗುತ್ತಿತ್ತು ಎಂದು ಹೇಳಲಾಗಿದೆ.