ರಾಜ್ಯದ ಕೆಲವು ಕಡೆ ಸಾವರ್ಕರ್ ಫ್ಲೆಕ್ಸ್ ಕಿತ್ತ ಘಟನೆಗೆ ಸಂಬಂಧಿಸಿದಂತೆ ಗೊಂದಲ ಉಂಟಾಗಿತ್ತು. ಅಲ್ಲದೆ ಸಾವರ್ಕರ್ ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡ ಕುರಿತಂತೆ ಪರ – ವಿರೋಧದ ಅಭಿಪ್ರಾಯಗಳು ರಾಜಕೀಯ ನಾಯಕರುಗಳಿಂದ ಕೇಳಿ ಬಂದಿತ್ತು.
ಇದರ ಮಧ್ಯೆ ಉಡುಪಿ ನಗರಸಭೆ, ವೃತ್ತ ಒಂದಕ್ಕೆ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಅವರ ಹೆಸರಿಡುವ ಕುರಿತಂತೆ ನಿರ್ಣಯ ಕೈಗೊಂಡಿದೆ. ಉಡುಪಿ ನಗರದ ಕೋರ್ಟ್ ರಸ್ತೆಯಲ್ಲಿರುವ ವೃತ್ತಕ್ಕೆ ಸಾವರ್ಕರ್ ಹೆಸರಿಡಲು ತೀರ್ಮಾನ ಕೈಗೊಳ್ಳಲಾಗಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುತ್ತದೆ.
ಬ್ರಹ್ಮಗಿರಿ ವೃತ್ತದಲ್ಲಿ ವೀರ ಸಾವರ್ಕರ್ ಪುತ್ಥಳಿಯನ್ನು ಸ್ಥಾಪಿಸಲು ಹಿಂದೂ ಸಂಘಟನೆಗಳು ಅನುಮತಿ ಕೇಳಿದ್ದು, ಆದರೆ ಯಾರ ಪುತ್ಥಳಿ ಸ್ಥಾಪನೆಗೂ ಅವಕಾಶವಿಲ್ಲದ ಕಾರಣ ವೃತ್ತಕ್ಕೆ ಸಾವರ್ಕರ್ ಅವರ ಹೆಸರಿಡಲು ನಿರ್ಣಯ ಕೈಗೊಳ್ಳಲಾಯಿತು.