ಉದ್ಯೋಗಿಗಳ ಭವಿಷ್ಯ ನಿಧಿ ಯೋಜನೆಯಿಂದ ಈವರೆಗೆ ವಂಚಿತರಾಗಿದ್ದ ಸ್ವಯಂ ಉದ್ಯೋಗಿಗಳಿಗೆ ಬಂಪರ್ ಸುದ್ದಿಯೊಂದು ಇಲ್ಲಿದೆ. ನಿಯಮಗಳಲ್ಲಿ ಬದಲಾವಣೆಗಳಿಗೆ ಇಪಿಎಫ್ಓ ಮುಂದಾಗಿದ್ದು, ಸ್ವಯಂ ಉದ್ಯೋಗಿಗಳನ್ನು ಪಿಂಚಣಿ ವ್ಯಾಪ್ತಿಗೆ ಸೇರಿಸಲು ಚಿಂತನೆ ನಡೆಸಲಾಗಿದೆ.
ಸರ್ಕಾರಿ ಉದ್ಯೋಗಿಗಳನ್ನು ಹೊರತುಪಡಿಸಿ ಔಪಚಾರಿಕ ವಲಯದ ಉದ್ಯೋಗಿಗಳಿಗೆ ಪಿಂಚಣಿ ಯೋಜನೆ ಅನ್ವಯವಾಗುತ್ತಿದ್ದು, ಆದರೆ ಕಂಪನಿಯು ಕನಿಷ್ಠ 20 ಮಂದಿ ಉದ್ಯೋಗಿಗಳನ್ನು ಹೊಂದಿರಬೇಕು ಎಂಬ ನಿಯಮವಿತ್ತು. ಹೀಗಾಗಿ ಬಹುತೇಕರು ಇಪಿಎಫ್ಓ ಯೋಜನೆಗೆ ಸೇರಿಕೊಳ್ಳಲು ಅಡಚಣೆಯಾಗಿತ್ತು.
ಇದೀಗ ನಿಯಮಗಳಲ್ಲಿ ಬದಲಾವಣೆಯಾದರೆ ಔಪಚಾರಿಕ ವಲಯದ ಎಲ್ಲಾ ಉದ್ಯೋಗಿಗಳ ಜೊತೆಗೆ ಸ್ವಯಂ ಉದ್ಯೋಗಿಗಳು ಕೂಡ ನಿವೃತ್ತಿ ಪಿಂಚಣಿ ಯೋಜನೆ ವ್ಯಾಪ್ತಿಗೆ ಬರಲಿದ್ದಾರೆ. ಇಪಿಎಫ್ಓ ಈಗಾಗಲೇ ರಾಜ್ಯಗಳ ಜೊತೆಗೆ ಈ ಕುರಿತಂತೆ ಮಾತುಕತೆ ನಡೆಸಿದೆ ಎಂದು ಹೇಳಲಾಗಿದೆ.