ಈ ಬಾರಿ ಆಗಸ್ಟ್ 31 ರ ಬುಧವಾರ ಗಣೇಶ ಚತುರ್ಥಿ ಆಚರಿಸಲಾಗ್ತಿದೆ. ಗಣೇಶನ ಮೂರ್ತಿ ಮನೆಯಲ್ಲಿದ್ದರೆ ಎಲ್ಲ ಕಷ್ಟಗಳು ಪರಿಹಾರವಾಗುತ್ತವೆ. ಸಂಕಷ್ಟ ದೂರವಾಗಿ ನೆಮ್ಮದಿ, ಸುಖ ಪ್ರಾಪ್ತಿಯಾಗುತ್ತದೆ. ಆದ್ರೆ ಗಣೇಶ ಮೂರ್ತಿ ಸ್ಥಾಪನೆ ಮಾಡುವಾಗ ಯಡವಟ್ಟಾದ್ರೆ ಸಂಕಷ್ಟ ನಿಶ್ಚಿತ.
ದೇವರ ಮನೆಯಲ್ಲಿ ಗಣೇಶನ ಮೂರ್ತಿ ಒಂದೇ ಇರಬೇಕು. ಒಂದಕ್ಕಿಂತ ಹೆಚ್ಚು ಗಣೇಶ ಮೂರ್ತಿ ಇದ್ರೆ ಸಿದ್ಧಿ-ಬುದ್ಧಿ ಕೋಪಗೊಳ್ತಾರೆ. ಮನೆಯಲ್ಲಿ ಎಂದೂ ಬಲಮುರಿ ಗಣೇಶ ಮೂರ್ತಿಯನ್ನು ಇಡಬೇಡಿ.
ಮನೆಯಲ್ಲಿ ಎಂದೂ ಕುಳಿತಿರುವ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಿ. ಕಚೇರಿಯಲ್ಲಿ ನಿಂತಿರುವ ಗಣೇಶ ಮೂರ್ತಿಯನ್ನು ಸ್ಥಾಪನೆ ಮಾಡಿ.
ಮನೆಯ ದಕ್ಷಿಣ ದಿಕ್ಕಿನಲ್ಲಿ, ಮೆಟ್ಟಿಲ ಕೆಳಗೆ ಹಾಗೂ ಮಲಗುವ ಸ್ಥಳದ ಬಳಿ ಎಂದೂ ಗಣೇಶ ಮೂರ್ತಿ ಇಡಬೇಡಿ. ಅದು ಧನ ಹಾನಿಗೆ ಕಾರಣವಾಗುತ್ತದೆ.
ಮಗಳನ್ನು ಗಂಡನ ಮನೆಗೆ ಕಳುಹಿಸುವ ವೇಳೆ ಎಂದೂ ಮಗಳಿಗೆ ಗಣೇಶ ಮೂರ್ತಿಯನ್ನು ನೀಡಬೇಡಿ. ಎಂದೂ ಲಕ್ಷ್ಮಿ ಹಾಗೂ ಗಣೇಶ ಒಟ್ಟಿಗಿರಬೇಕೆಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಗಣೇಶ ಮೂರ್ತಿಯೊಂದೇ ನೀಡಿದ್ರೆ ಆರ್ಥಿಕ ನಷ್ಟಕ್ಕೆ ಕಾರಣವಾಗುತ್ತದೆ.