ಹಿಂದೂ ಶಾಸ್ತ್ರದಲ್ಲಿ ಬುಧವಾರವನ್ನು ಗಣಪನಿಗೆ ಅರ್ಪಿಸಲಾಗಿದೆ. ಬುಧವಾರ ಗಣೇಶನನ್ನು ಮೆಚ್ಚಿಸಲು ಭಕ್ತರು ವಿಶೇಷ ಪೂಜೆ ಮಾಡ್ತಾರೆ. ಈ ಬಾರಿ ಗಣೇಶ ಚತುರ್ಥಿ ಬುಧವಾರ ಬಂದಿರುವುದು ವಿಷೇಶ, ಆದಿಯಲ್ಲಿ ಪೂಜಿಸಲ್ಪಡುವ ದೇವರು ಗಣಪತಿ. ಪ್ರತಿ ಪೂಜೆಯ ಮೊದಲು ಗಣೇಶನನ್ನು ಪೂಜಿಸಲಾಗುತ್ತದೆ. ಬುಧವಾರ ಗಣೇಶನ ಆರಾಧನೆ ಮಾಡುವವರು ಕೆಲವೊಂದು ವಿಷ್ಯಗಳನ್ನು ಗಮನದಲ್ಲಿಟ್ಟುಕೊಳ್ಳಬೇಕು.
ಗಣೇಶ ದೂರ್ವೆ ಪ್ರಿಯ. ಹಾಗಾಗಿ ಬುಧವಾರ ಗಣೇಶನ ಪೂಜೆ ವೇಳೆ ದೂರ್ವೆ ಅರ್ಪಿಸಬೇಕು. ಇದರಿಂದ ಗಣೇಶ ಬೇಗ ಭಕ್ತರಿಗೆ ಒಲಿಯುತ್ತಾನೆಂಬ ನಂಬಿಕೆಯಿದೆ.
ಗಣೇಶನಿಗೆ ಪ್ರಿಯವಾದ ತಿಂಡಿಗಳಲ್ಲಿ ಮೋದಕವೂ ಒಂದು. ಬುಧವಾರ ಗಣೇಶನ ಭಕ್ತರು ಮೋದಕವನ್ನು ಅರ್ಪಿಸಿ ಪೂಜೆ ಮಾಡಬೇಕು.
ಕೆಂಪು ಸಿಂಧೂರವನ್ನು ಗಣೇಶ ಇಷ್ಟಪಡ್ತಾನೆ. ಹಾಗಾಗಿ ಗಣೇಶನ ಪೂಜೆಗೆ ಅವಶ್ಯಕವಾಗಿ ಕೆಂಪು ಸಿಂಧೂರವನ್ನು ಅರ್ಪಿಸಿ. ಗಣೇಶನಿಗೆ ಕೆಂಪು ಸಿಂಧೂರವನ್ನು ಇಡಿ. ಹಾಗೆ ನಿಮ್ಮ ಹಣೆಗೂ ಪ್ರತಿ ದಿನ ಕೆಂಪು ಸಿಂಧೂರವನ್ನು ಇಟ್ಟುಕೊಳ್ಳಿ.