ರಾಷ್ಟ್ರ ರಾಜಧಾನಿ ನವದೆಹಲಿ ಮಹಿಳೆಯರಿಗೆ ಸುರಕ್ಷಿತವಲ್ಲ ಎಂಬ ಸಂಗತಿ ಮತ್ತೊಮ್ಮೆ ಬಹಿರಂಗವಾಗಿದೆ. ದೆಹಲಿಯಲ್ಲಿ ಪ್ರತಿನಿತ್ಯ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ನಡೆಯುತ್ತಿದೆ ಎಂಬ ಆಘಾತಕಾರಿ ಸಂಗತಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ವರದಿ ಮೂಲಕ ತಿಳಿದು ಬಂದಿದೆ.
2021 ರಲ್ಲಿ ಮಹಿಳೆಯರ ಮೇಲೆ ನಡೆದ ದೌರ್ಜನ್ಯದ 13,892 ಪ್ರಕರಣಗಳು ದಾಖಲಾಗಿದ್ದು 2020ಕ್ಕೆ ಹೋಲಿಸಿದರೆ ಇವುಗಳಲ್ಲಿ ಶೇಕಡ 40ರಷ್ಟು ಹೆಚ್ಚಳವಾಗಿದೆ. ಜೊತೆಗೆ ಅಪರಾಧ ಪ್ರಕರಣಗಳಲ್ಲೂ ಹೆಚ್ಚಳ ಕಂಡಿದೆ.
ದೆಹಲಿ ಬಳಿಕ ಮುಂಬೈ ಎರಡನೇ ಸ್ಥಾನದಲ್ಲಿದ್ದು, ಮಹಿಳೆಯರ ಮೇಲೆ ನಡೆದ 5,543 ದೌರ್ಜನ್ಯ ಪ್ರಕರಣಗಳು ಇಲ್ಲಿ ದಾಖಲಾಗಿದ್ದರೆ ನಂತರದ ಸ್ಥಾನದಲ್ಲಿರುವ ಬೆಂಗಳೂರಿನಲ್ಲಿ 3,127 ಪ್ರಕರಣಗಳು ದಾಖಲಾಗಿವೆ.