ಬೆಲೆ ಏರಿಕೆಯಿಂದ ಈಗಾಗಲೇ ತತ್ತರಿಸಿ ಹೋಗಿರುವ ಜನಸಾಮಾನ್ಯರಿಗೆ ಮತ್ತೊಂದು ಶಾಕಿಂಗ್ ಸುದ್ದಿ ಇಲ್ಲಿದೆ. ಬಹುತೇಕ ಸೇವೆ ಹಾಗೂ ವಸ್ತುಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರಲಾಗಿದ್ದು, ಈಗ ಮತ್ತಷ್ಟು ಸೇವೆಗಳನ್ನು ಇದಕ್ಕೆ ಸೇರಿಸಲಾಗಿದೆ.
ರೈಲು, ವಿಮಾನ ಅಥವಾ ಹೋಟೆಲ್ ಕೊಠಡಿಗಳನ್ನು ಮುಂಗಡವಾಗಿ ಕಾಯ್ದಿರಿಸಿ ಬಳಿಕ ಅನಿವಾರ್ಯ ಕಾರಣಗಳಿಂದ ರದ್ದುಗೊಳಿಸಿದರೆ ಅದಕ್ಕೂ ಸಹ ಜಿ.ಎಸ್.ಟಿ. ತೆರಬೇಕಾಗಿದೆ. ಈ ಕುರಿತಂತೆ ಹಣಕಾಸು ಇಲಾಖೆ ಅಧಿಸೂಚನೆಯನ್ನು ಹೊರಡಿಸಿದೆ.
ರೈಲಿನ ಖಾತರಿಯಾದ ಟಿಕೆಟ್ ರದ್ದುಪಡಿಸಿದರೆ ಮಾತ್ರ ಇದು ಅನ್ವಯವಾಗಲಿದ್ದು, ಹವಾ ನಿಯಂತ್ರಿತ ಮತ್ತು ಮೊದಲ ದರ್ಜೆ ಟಿಕೆಟಿಗೆ ಮಾತ್ರ ತೆರಿಗೆ ವಿಧಿಸಲಾಗುತ್ತದೆ. ಇನ್ನುಳಿದಂತೆ ಸೆಕೆಂಡ್ ಕ್ಲಾಸ್ ಹಾಗೂ ಸಾಮಾನ್ಯ ದರ್ಜೆಯ ಪ್ರಯಾಣಕ್ಕೆ ವಿನಾಯಿತಿ ಸಿಗಲಿದೆ.
ವಿಮಾನ ಟಿಕೆಟ್ ಹಾಗೂ ಹೋಟೆಲ್ ಕೊಠಡಿ ಬುಕಿಂಗ್ ರದ್ದುಗೊಳಿಸಿದ ಸಂದರ್ಭದಲ್ಲೂ ಸಹ ತೆರಿಗೆ ಅನ್ವಯವಾಗಲಿದ್ದು, ಮೂಲ ಸೇವೆಯನ್ನು ಬುಕ್ ಮಾಡುವಾಗ ವಿಧಿಸಿದ ತೆರಿಗೆ ಪ್ರಮಾಣ ರದ್ದತಿ ವೇಳೆಯೂ ಅನ್ವಯವಾಗುತ್ತದೆ ಎಂದು ತಿಳಿಸಲಾಗಿದೆ.