ರಾಮನಗರ: ಬೆಂಗಳೂರು -ಮೈಸೂರು ರಾಷ್ಟ್ರೀಯ ಹೆದ್ದಾರಿ ಕಳಪೆಯಾಗಿದೆ. ಬರೀ ಫೋಟೋ ತೆಗೆಸಿಕೊಳ್ಳುವುದು ಮುಖ್ಯವಲ್ಲ ಕೆಲಸ ಮಾಡಬೇಕು ಎಂದು ಬಿಜೆಪಿ ಸಂಸದ ಪ್ರತಾಪ ಸಿಂಹ ಅವರಿಗೆ ಕಾಂಗ್ರೆಸ್ ಸಂಸದ ಡಿ.ಕೆ. ಸುರೇಶ್ ಟಾಂಗ್ ಕೊಟ್ಟಿದ್ದಾರೆ.
ಈ ಮೊದಲು ರಸ್ತೆ ಸರಿಯಾಗಿಯೇ ಇತ್ತು. ಆದರೆ, ಸಂಚಾರ ದಟ್ಟಣೆ ಉಂಟಾಗಿತ್ತು ಎಂದು ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಕಿಟ್ಟಮಾರನಹಳ್ಳಿಯಲ್ಲಿ ಡಿ.ಕೆ. ಸುರೇಶ್ ಹೇಳಿದ್ದಾರೆ.
ಹೆದ್ದಾರಿ ಕಾಮಗಾರಿಯ ವೇಳೆ ಹಳ್ಳಗಳನ್ನು ಮುಚ್ಚಿರುವುದರಿಂದ ಅವಾಂತರವಾಗಿದೆ. ಹೆದ್ದಾರಿ ಕಾಮಗಾರಿಯಿಂದ ಅಕ್ಕಪಕ್ಕದ ಗ್ರಾಮಗಳಿಗೆ ಅನುಕೂಲವಾಗಿಲ್ಲ. ಹೆದ್ದಾರಿ ಕಾಮಗಾರಿಗಾಗಿ ರಾಮಮ್ಮನ ಕೆರೆ ಒತ್ತುವರಿ ಮಾಡಲಾಗಿದೆ. ಉತ್ತರ ಕರ್ನಾಟಕ, ಕೊಡಗು ಜಿಲ್ಲೆಯಲ್ಲಿ ಮಳೆ ಹಾನಿಗೆ ಹೆಚ್ಚಿನ ಪರಿಹಾರ ನೀಡಲಾಗಿತ್ತು. ಅದೇ ರೀತಿ ರಾಮನಗರದಲ್ಲಿ ಮಳೆಹಾನಿಗೆ ಹೆಚ್ಚಿನ ಪರಿಹಾರ ಕೊಡಬೇಕು ಎಂದು ಹೇಳಿದ್ದಾರೆ.
ರಾಮನಗರದರಲ್ಲಿ ಮುಖ್ಯಮಂತ್ರಿ ಭೇಟಿ ತೋರ್ಪಡಿಕೆಗೆ ಎನ್ನುವಂತಿದೆ. ಮಳೆ ಮತ್ತು ನೆರೆ ಉಂಟಾದ ಸಂದರ್ಭದಲ್ಲಿ ಮುಖ್ಯಮಂತ್ರಿಯಾದವರು ರಾಜಕೀಯ ಮಾಡಬಾರದು ಎಂದು ಡಿ.ಕೆ. ಸುರೇಶ್ ಹೇಳಿದ್ದಾರೆ.