ಉಡುಪಿ: ಪ್ರಕೃತಿಯ ಸೊಬಗು, ವೈಚಿತ್ರ್ಯವೇ ಹಾಗೇ. ಕೆಲವೊಮ್ಮೆ ಆಗಸದಲ್ಲಿ ತೇಲುವ ಮೋಡಗಳು ಚಿತ್ರ ವಿಚಿತ್ರ ಕಲಾಕೃತಿಗಳಂತೆ ಕಣ್ಮನ ಸೆಳೆಯುತ್ತವೆ. ವಿವಿಧ ರೀತಿಯ ಆಕಾರಗಳು ಮೂಡಿಬಂದ ರೀತಿಯಲ್ಲಿ ಗಮನ ಸೆಳೆದು ಕಣ್ಮರೆಯಾಗುತ್ತವೆ. ಹೀಗೆ ಕ್ಷಣಾರ್ಧದಲ್ಲಿ ಬೆಳ್ಳಿ ಮೋಡದಲ್ಲಿ ಮೂಡಿ ಬಂದ ಗಣೇಶನ ಆಕೃತಿಯನ್ನು ಬಾಲಕನೊಬ್ಬ ತನ್ನ ಕ್ಯಾಮರಾದಲ್ಲಿ ಸೆರೆ ಹಿಡಿದಿರುವುದು ವಿಶೇಷ.
ದೀಪಕ್ ದೀಪೇಶ್ ಶೆಣೈ ಎಂಬ 7ನೇ ತರಗತಿ ಬಾಲಕ ತನ್ನ ಕ್ಯಾಮಾರದಲ್ಲಿ ಆಗಸದಲ್ಲಿ ಮೂಡಿದ ವಿನಾಯಕನ ಆಕೃತಿಯನ್ನು ಗಣೇಶ ಚತುರ್ಥಿಯ ಶುಭ ಸಂದರ್ಭದಲ್ಲಿ ಸೆರೆ ಹಿಡಿದಿದ್ದಾನೆ.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಸದಸ್ಯನಾಗಿರುವ ದೀಪೇಶ್ ದೀಪಕ್ ಶೆಣೈ, ಉಡುಪಿ ಮುಕುಂದಕೃಪಾ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿದ್ದಾನೆ. ಫೊಟೊಗ್ರಫಿಯಲ್ಲಿ ಅತೀವ ಆಸಕ್ತಿ ಹೊಂದಿದ ದೀಪೇಶ್ ದೀಪಕ್ ಶೆಣೈ ಕ್ಯಾಮಾರ ಕಣ್ಣಿನಿಂದ ಆಗಸದಲ್ಲಿ ಕೆಲವೇ ಸೆಕೆಂಡುಗಳಷ್ಟೇ ಮೂಡಿಬಂದ ಈ ವಿನಾಯಕನ ಆಕಾರವನ್ನು ಕ್ಷಣ ಮಾತ್ರದಲ್ಲಿ ಸೆರೆಹಿಡಿದಿದ್ದು, ಅಪರೂಪದ ಅತಿವಿಶಿಷ್ಟ ಚಿತ್ರ ಎಲ್ಲೆಡೆ ಗಮನ ಸೆಳೆಯುತ್ತಿದೆ.