ಬೆಂಗಳೂರು: ಅಪ್ರಾಪ್ತರಿಂದ ಮಾದಕ ವಸ್ತು ಸೇವನೆ ಎಂಬ ಮಾಹಿತಿ ಆಧಾರದ ಮೇಲೆ ಬೆಂಗಳೂರಿನ ಬ್ಲೋ ಹುಕ್ಕಾ ಬಾರ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಕಬ್ಬನ್ ಪಾರ್ಕ್ ಠಾಣಾ ವ್ಯಾಪ್ತಿಯ ಹುಕ್ಕಾ ಬಾರ್ ನ ಮೇಲೆ ದಾಳಿ ನಡೆಸಿ, ಹುಕ್ಕಾ ಬಾರ್ ನ ಪರಿಕರಗಳು, 80ಕ್ಕೂ ಹೆಚ್ಚು ಹುಕ್ಕಾ ಫ್ಲೇವರ್ ಹಾಗೂ 6,050 ನಗದು ಹಣವನ್ನು ವಶಕ್ಕೆ ಪಡೆದಿದ್ದಾರೆ.
ಬ್ಲೋ ಹುಕ್ಕಾ ಬಾರ್ ಮಾಲೀಕರು ಹಾಗೂ ಮ್ಯಾನೇಜರ್ ವಿರುದ್ಧ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.